RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ

ಘಟಪ್ರಭಾ:21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ 

21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ

ಘಟಪ್ರಭಾ ಜ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದಿ.21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಲಿದೆ.
ಈ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಜಾತಿ,ಮತ,ಪಂಥಗಳೆಂಬ ಬೇದ ಭಾವವಿಲ್ಲದೇ ಈ ಪುಣ್ಯಮಯ ಕಾರ್ಯವು ಭಕ್ತರ ಪಾಲಿಗೆ ಅನುಪಮ ಹಾಗೂ ಸೌಭಾಗ್ಯವೆಂದು ತಿಳಿದು ಸದ್ಭಕ್ತರು ತನು,ಮನ,ಧನ ಅರ್ಪಿಸಿ ಜಗನ್ಮಾತೆ ಶ್ರೀ ಅಂಬಾಭವಾನಿದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಂಬಾಭವಾನಿ ದೇವಸ್ಥಾನ ಸೇವಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕುಂಕುಮಾರ್ಚನೆಯಲ್ಲಿ ಭಾಗವಹಿಸುವ ಸದ್ಭಕ್ತರು ಹೆಚ್ಚಿನ ಮಾಹಿತಿಗಾಗಿ ಮೋ: 9731976721, 9731941403 ಸಂಪರ್ಕಿಸಲು ಕೋರಲಾಗಿದೆ.

Related posts: