ಗೋಕಾಕ:ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ : ಜಯಾನಂದ ಮುನವಳ್ಳಿ
ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ : ಜಯಾನಂದ ಮುನವಳ್ಳಿ
ಗೋಕಾಕ ಜ 21 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಅವರು ನಗರದ ಕೆಎಲ್‍ಇ ಸಂಸ್ಥೆಯ ನರ್ಸಿಂಗ್ ಸೈನ್ಸ್ ಕಾಲೇಜಿನ ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರಲ್ಲದೇ ನಗರದಲ್ಲಿ ಕೆಎಲ್‍ಇ ಸಂಸ್ಥೆಯು ವಿವಿಧ ಕಾಲೇಜುಗಳನ್ನು ಪ್ರಾರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನರ್ಸಿಂಗ್ ಕಲಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳಿವೆ. ತಾವು ಪಡೆದ ಶಿಕ್ಷಣದಿಂದ ರೋಗಿಗಳ ಆರೈಕೆಗೆ ಹೆಚ್ಚಿನ ಮಹತ್ವ ನೀಡಿ ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳೀರಿ ಎಂದು ಕರೆ ನೀಡಿದರು.
ವೇದಿಕೆ ಮೇಲೆ ನಗರದ ನವಜೀವನ ನರ್ಸಿಂಗ್ ಹೋಂ ನ ಡಾ| ಪಾರ್ವತಿ ಹೊಸಮನಿ, ಕೆಎಲ್‍ಇ ಆಸ್ಪತ್ರೆಯ ಡಾ| ಧರೇಪ್ಪ ಚೌಗಲಾ, ಕೆಎಲ್‍ಇ ಶಾಲೆಯ ಪ್ರಾಚಾರ್ಯ ಅನುಪಾ ಕೌಶಿಕ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಆನಂದ.ಎಚ್. ಇದ್ದರು.
ಪೂಜಾ ಚುನಮರಿ ಸ್ವಾಗತಿಸಿದರು.ಸಕ್ಕುಬಾಯಿ ಭಮ್ಮನ್ನವರ ನಿರೂಪಿಸಿದರು. ದುಂಡೇಶ ನೇಗಿನಾಳ ವಂದಿಸಿದರು.