ಮೂಡಲಗಿ:ತಹಶೀಲ್ದಾರ ಕಛೇರಿಯಲ್ಲಿ ಸೋಮವಾರ ಜರುಗಿದ ನಿಜ ಶರಣ ಅಂಭಿಗರ ಚೌಡಯ್ಯನವರ 859ನೇ ಜಯಂತಿ ಆಚರಣೆ
ತಹಶೀಲ್ದಾರ ಕಛೇರಿಯಲ್ಲಿ ಸೋಮವಾರ ಜರುಗಿದ ನಿಜ ಶರಣ ಅಂಭಿಗರ ಚೌಡಯ್ಯನವರ 859ನೇ ಜಯಂತಿ ಆಚರಣೆ
ಮೂಡಲಗಿ ಜ 21 : ಇಲ್ಲಿಯ ತಾಲೂಕಾ ಆಡಳತದಿಂದ ತಹಶೀಲ್ದಾರ ಕಛೇರಿಯಲ್ಲಿ ಸೋಮವಾರ ಜರುಗಿದ ನಿಜ ಶರಣ ಅಂಭಿಗರ ಚೌಡಯ್ಯನವರ 859ನೇ ಜಯಂತಿಯಲ್ಲಿ ತಾಲೂಕಾ ದಂಡಾಧಿಕಾರಿ ಮುರಳಿಧರ ತಳ್ಳಿಕೇರಿ ಚೌಡಯ್ಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು,
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬಸಪ್ಪ ನಾಗರಾಳ ಉಪಾಧ್ಯಕ್ಷ ರಾಜು ನಾಶಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ನಿಂಗಪ್ಪ ಪಿರೋಜಿ, ಮಾಜಿ ಸದಸ್ಯರಾದ ಅಜೀಜ ಡಾಂಗೆ, ಅನ್ವರ ನಧಾಪ, ಸಚೀನ ಸೋನವಾಲ್ಕರ, ರವಿ ನೇಸೂರ ಮತ್ತಿತರು ಉಪಸ್ಥಿತರಿದ್ದರು
ಇಲ್ಲಿಯ ಗಂಗಾ ಪರಮೇಶ್ವರಿ ಕೊ-ಆಪ್ ಸೂಸಾಯಿಟಿ ಮತ್ತು ಗಂಗಾಮತಸ್ಥ ಸಮಾಜದ ವತಿಯಿಂದ ಏರ್ಪಡಿಸಿ ನಿಜ ಶರಣ ಅಂಭಿಗರ ಚೌಡಯ್ಯನವರ ಭಾವಚಿತ್ರದ ಮೇರವಣಿಗೆ ಗಾಂಧಿ ವೃತ್ತದಲ್ಲಿ ಇಲ್ಲಿಯ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾಧಬೋಧ ಸ್ವಾಮಿಜಿ ಹಾಗೂ ತಾಲೂಕಾ ದಂಡಾಧಿಕಾರಿ ಮುರಳಿಧರ ತಳ್ಳಿಕೇರಿ ಅವರು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವದೂಂದಿಗೆ ಚಾಲನೆ ನೀಡಿದರು. ಇದೆ ಸಮಯದಲ್ಲಿ ಶ್ರೀಗಳು, ಗಣ್ಯರು ಗಂಗಾ ಪರಮೇಶ್ವರಿ ಕೊ-ಆಪ್ ಸೂಸಾಯಿಟಿಯಿಂದ ಹೊರತಂದ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೋಳಿಸಿದರು
ಗಂಗಾ ಮತಸ್ಥ ಸಮಾಜದ ಮುಖಂಡರಾದ ಕೃಷ್ಣಾ ನಾಶಿ, ಬಸವರಾಜ ತಳವಾರ, ಸಂತ್ರಾಮ ನಾಶಿ, ರಾಜು ನಾಶಿ, ಸದಾಶಿವ ತಳವಾರ, ರಮೇಶ ಪೂಜೇರಿ, , ಈರಣ್ಣಾ ನಾಶಿ, ರವಿ ನೇಸೂರ, ಭೀಮಶಿ ತಳವಾರ, ರಾವಜಿ ನಾಶಿ, ಅಜೀತ ಸುಣಗಾರ, ಶಿವಬಸು ಚೌಡಕಿ, ಸತ್ಯಪ್ಪಾ ತಳವಾರ, ಬಂಗಾರೆಪ್ಪಾ ನಾಶಿ, ಸಂತೋಷ ನೇಸೂರ, ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳ ಹಾಗೂ ಮೂಡಲಗಿ ಗಂಗಾ ಮತಸ್ಥ ಸಮಾಜದ ಹಿರಿಯರು ಉಪಸ್ಥಿತರಿದ್ದರು.