RNI NO. KARKAN/2006/27779|Sunday, December 22, 2024
You are here: Home » breaking news » ಬೆಳಗಾವಿ:ಅಥಣಿಯಿಂದ ಸ್ಪರ್ಧಿಸಿದರೆ ಜನರೇ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ : ಮಾಜಿ ಸಚಿವ ಸವದಿ ಕಿಡಿ

ಬೆಳಗಾವಿ:ಅಥಣಿಯಿಂದ ಸ್ಪರ್ಧಿಸಿದರೆ ಜನರೇ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ : ಮಾಜಿ ಸಚಿವ ಸವದಿ ಕಿಡಿ 

ಅಥಣಿಯಿಂದ ಸ್ಪರ್ಧಿಸಿದರೆ ಜನರೇ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ : ಮಾಜಿ ಸಚಿವ ಸವದಿ ಕಿಡಿ

 

ಬೆಳಗಾವಿ ಜು 1:  ಅಥಣಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ, ಈ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಲು ಸಿದ್ಧ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಸಿರುವ ಶಾಸಕ ಸವದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥಣಿಯಿಂದ ಸ್ಪರ್ಧಿಸುವುದಾದರೆ ಸ್ವಾಗತಿಸುತ್ತೇನೆ. ಸ್ಥಳೀಯ ಕಾಂಗ್ರೆಸ್‌‌ನವರಿಗೆ ನನ್ನ ವಿರುದ್ಧ ಸ್ಪರ್ಧಿಸಲು ಸಾರ್ಮಥ್ಯ ಇಲ್ಲ. ಅಥಣಿಯಿಂದ ಸ್ಪರ್ಧಿಸಿದರೆ ಜನರೇ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದು ಲೇವಡಿ ಮಾಡಿದರು

 ಸದನದಲ್ಲಿ ಬ್ಲೂ ಫಿಲಂ ನೋಡಿದ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಆ ದಿನ ಏನಾಯಿತು, ಆ ಘಟನೆ ಹೇಗಾಯಿತು ಎಂಬುದನ್ನು ಆಗಲೇ ಸಾಕಷ್ಟು ಬಾರಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ ಶಾಸಕ ಲಕ್ಷ್ಮಣ ಸವದಿ,  ಮುಖ್ಯಮಂತ್ರಿ  ಹಗಲು ಹೊತ್ತಿನಲ್ಲಿ ನಿದ್ರೆ ಮಾಡುತ್ತಾರೆ. ರಾತ್ರಿ ಯಾರ ಜತೆ ಏನು ಮಾಡುತ್ತಾರೆ, ಏನೇನು ನೋಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಹ್ವಾನಿಸಿದರು.

ಮೋದಿ ಅವರ ಬಗ್ಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುತ್ತಾರೆ. ಇದು ಅವರಿಗೆ ಶೋಭೆ ತರುವುದಿಲ್ಲ.  ಗೌರವ ಘನತೆಗೆ ತಕ್ಕಂತೆ ಮಾತನಾಡುವುದನ್ನು  ಸಿದ್ದರಾಮಯ್ಯ ಕಲಿಯಬೇಕು. ಬೇರೆಯವರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

Related posts: