ಗೋಕಾಕ:ನಗರಸಭೆಯ 14ನೇ ಹಣಕಾಸು ಯೋಜನೆಯಡಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ
ನಗರಸಭೆಯ 14ನೇ ಹಣಕಾಸು ಯೋಜನೆಯಡಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ
ಗೋಕಾಕ ಜ 23 : ನಗರಸಭೆಯ 14ನೇ ಹಣಕಾಸು ಯೋಜನೆಯಡಿ ವಾರ್ಡ ನಂ 29ರ ಸೋಮವಾರ ಪೇಠೆಯಲ್ಲಿ 30ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಇಲ್ಲಿಯ ಮುಪ್ಪಯ್ಯನಮಠದ ಶ್ರೀ ರಾಚೂಟೇಶ್ವರ ಮಹಾಸ್ವಾಮಿಗಳು ಬುಧವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಎಸ್.ಎ.ಕೋತವಾಲ, ಲಕ್ಷ್ಮೀ ದೇಶನೂರ, ಸಹಾಯಕ ಅಭಿಯಂತÀ ವಿ.ಎಸ್.ತಡಸಲೂರ, ಅಭಿಯಂತ ಎ.ಬಿ.ರಜಪೂತ, ವಾರ್ಡನ ಮುಖಂಡರಾದ ಪ್ರವೀಣ ಚುನಮರಿ, ಮಲ್ಲಿಕಾರ್ಜುನ ಕರೋಶಿ, ದೇವಾನಂದ ಕಂಬಾರ, ಬಸವರಾಜ ದೇಶನೂರ, ಶೋಭಾ ಕುರಬೇಟ, ಈರವ್ವ ಜೋತಾವರ, ಕವಿತಾ ಕುರಬೇಟ, ಜ್ಯೋತಿಭಾ ಸುಭಂಜಿ, ಬಸವರಾಜ ಶೇಗುಣಶಿ, ಧರೆಪ್ಪ ಕಣಗಲಾ, ಬಾಳಪ್ಪ ಕುರಬೇಟ ಹಾಗೂ ನಗರ ಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.