ಗೋಕಾಕ:ಸಂಗೊಳ್ಳಿ ರಾಯಣ್ಣಾ ಅಪ್ರತಿಮ ದೇಶ ಭಕ್ತ : ಡಾ.ರಾಜೇಂದ್ರ ಸಣ್ಣಕ್ಕಿ
ಸಂಗೊಳ್ಳಿ ರಾಯಣ್ಣಾ ಅಪ್ರತಿಮ ದೇಶ ಭಕ್ತ : ಡಾ.ರಾಜೇಂದ್ರ ಸಣ್ಣಕ್ಕಿ
ಗೋಕಾಕ ಜ 26 : ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣಾ ಅಪ್ರತಿಮ ದೇಶ ಭಕ್ತನಾಗಿದ್ದನೆಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ತಾಲೂಕಿನ ಕೌಜಲಗಿ ಗ್ರಾಮದ ಉದ್ದವ್ವಾದೇವಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಜರುಗಿದ ಸಂಗೊಳ್ಳಿ ರಾಯಣ್ಣಾ ಬಲಿದಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಹಿರಿದಾಗಿದೆ. ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿ ಕೆಲಸ ನಿರ್ವಹಿಸಿ ಹೋರಾಟಕ್ಕೆ ಕಳೆ ತಂದ ವ್ಯಕ್ತಿಯಾಗಿದ್ದನು. ರಾಯಣ್ಣನ ದೇಶ ಪ್ರೇಮವನ್ನು ಎಷ್ಟು ಕೊಂಡಾಡಿದರೂ ಸಾಲದು. ಇಂದಿನ ಯುವ ಪೀಳಿಗೆ ಸಂಗೊಳ್ಳಿ ರಾಯಣ್ಣನ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದುವೇ ರಾಯಣ್ಣನಿಗೆ ಸಲ್ಲಿಸುವ ಗೌರವವೆಂದು ಅವರು ಹೇಳಿದರು.
ಸಾನಿಧ್ಯವಹಿಸಿದ್ದ ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತನಲ್ಲ. ಅವನೊಬ್ಬ ಜಾತ್ಯಾತೀತ ವ್ಯಕ್ತಿ. ರಾಯಣ್ಣನಂತಹ ಅಪ್ರತಿಮ ಪುರುಷರನ್ನು ಕೇವಲ ಒಂದೇ ಜಾತಿಗೆ ಸೀಮಿತ ಮಾಡಬೇಡಿ. ಮಹಾನ್ ಸಂತ-ಪುರುಷರು ಮನುಕುಲದ ಆಸ್ತಿ ಎಂದು ಬಣ್ಣಿಸಿದರು.
ವಿಠ್ಠಲ ದೇವಋಷಿ, ಅಡಿವೆಪ್ಪ ದಳವಾಯಿ, ಸುಭಾಸ ಕೌಜಲಗಿ, ಸಿದ್ದಪ್ಪ ಹಳ್ಳೂರ, ರಾಯಪ್ಪ ಬಳೋಲದಾರ, ಶಿವರಾಯಿ ಹಳ್ಳೂರ, ಅಶೋಕ ಉದ್ದಪ್ಪನವರ, ಶಾಂತಪ್ಪ ಹಿರೇಮೇತ್ರಿ, ಶಿವು ಲೋಕನ್ನವರ, ನೀಲಪ್ಪ ಕೇವಟಿ, ಜಕೀರ ಜಮಾದಾರ, ರಮ್ಜಾನ್ ಪೋದಿ, ಹಾಸೀಮ್ ನಗಾರ್ಚಿ, ವೆಂಕಟ ದಳವಾಯಿ, ಬಸು ಜೋಗಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಜುನಾಥ ಸಣ್ಣಕ್ಕಿ ಸ್ವಾಗತಿಸಿದರು. ಮಾಲತೇಶ ಸಣ್ಣಕ್ಕಿ ನಿರೂಪಿಸಿದರು. ಅವ್ವಣ್ಣ ಮೋಡಿ ವಂದಿಸಿದರು.
ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣನ ಬಲಿದಾನದ ಅಂಗವಾಗಿ ಉದ್ದವ್ವನ ಗುಡಿಯಿಂದ ಗ್ರಾಮ ಪಂಚಾಯತಿವರೆಗೆ ಪಂಜಿನ ಮೆರವಣಿಗೆ ಜರುಗಿತು. ನಂತರ ತಾಲೂಕಾ ಮಟ್ಟದ ಪ್ರಬಂದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.