RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ

ಗೋಕಾಕ:ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ 

ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯ : ಮಂಗಲಾ ಮೆಟಗುಡ್ಡ

ಗೋಕಾಕ ಜ 27 : ಸಮಾಜದ ಏಳ್ಗೆಗಾಗಿ ಸಾಹಿತ್ಯ ಹುಟ್ಟಿದ್ದು, ಸಾಹಿತ್ಯದಿಂದ ಸಮಾಜದ ಸುಧಾರಣೆ ಸಾಧ್ಯವೆಂದು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕಗಳು ಆಯೋಜಿಸಿದ್ದ ಸಾಹಿತಿ ಮಹಾಲಿಂಗ ಮಂಗಿ ಅವರ ವಿರಚಿತ 12 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ವೇದ ಸಾಹಿತ್ಯ ಮನುಕುಲ ಉದ್ದಾರಕ್ಕಾಗಿಯೇ ಹುಟ್ಟಿದ್ದು, ವಚನ, ಶರಣ ಸಾಹಿತ್ಯಗಳು ಜೀವಂತ ಉದಾಹರಣೆಗಳಾಗಿವೆ. ಇಂತಹ ಸಾಹಿತ್ಯವನ್ನು ಎಲ್ಲರೂ ಪ್ರೋತ್ಸಾಹಿಸಬೇಕು. ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಸಾಹಿತಿ ಮಹಾಲಿಂಗ ಮಂಗಿ ಅವರ ಕೃತಿಗಳು ಆಳವಾದ ಚಿಂತನೆ, ಓದಿಸಿಕೊಂಡು ಹೋಗುವ ರಚನೆಯಿಂದ ಜನರ ಮನದಲ್ಲಿ ನಿಲ್ಲುತ್ತವೆ. ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಕನ್ನಡ ಸಾಹಿತ್ಯಕ್ಕೆ ಬರಲೆಂದು ಹೇಳಿದರು.
ಕೃತಿಗಳ ಕುರಿತು ಮಹಾಲಿಂಗಪೂರದ ಖ್ಯಾತ ಸಾಹಿತಿ ಡಾ|| ಅಶೋಕ ನರೋಡೆ, ಮೂಡಲಗಿ ಖ್ಯಾತ ಲೇಖಕ ಡಾ|| ಮಹಾದೇವ ಜಿಡ್ಡಿಮನಿ, ಘೋಡಗೇರಿಯ ಖ್ಯಾತ ಕಥಾಲೇಖಕ ಬಸವಣ್ಣೆಪ್ಪ ಕಂಬಾರ ಅವರು ಮಾತನಾಡಿ ಸಾಹಿತಿ ಮಹಾಲಿಂಗ ಮಂಗಿ ಅವರ ಕೃತಿಗಳು ಸೃಜನಶೀಲತೆ, ಆಚಾರ-ವಿಚಾರ, ಸಂಸ್ಕøತಿ, ಸಂಪ್ರದಾಯಗಳಿಂದ ಸೂರ್ಯನ ಬೆಳಕಿನಂತೆ ಓದುಗರ ಮನಸ್ಸಿನಲ್ಲಿ ಪ್ರಜ್ವಲಿಸುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಮಹಾಲಿಂಗ ಮಂಗಿ ಅವರು ರಚಿಸಿದ ಬೆಂಕಿಯಲ್ಲಿ ಅರಳಿದ ಕೆಂಡ ಸಂಪಿಗೆ, ದೇಸಗತಿ,ಪ್ರಾರಬ್ದ, ವಿಷಾದ, ಸಂಬಂಧಗಳು, ಅಸಾಮಾನ್ಯರು, ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಗಳು ರಸಗ್ರಹಣ, ಗೋಕಾವಿ ನಾಡ-ಗರತಿಯ ಹಾಡ, ಕಲಾರಾಧಕ ಎಂ.ಪಿ.ಮಲ್ಲೇಶ, ಸಿದ್ದಸಾಧಕ ಲಕ್ಷ್ಮಣ ಪಟಾತ ಹಾಗೂ ರಾಜೇಶ್ವರಿ ಒಡೆಯರ ಸಂಪಾದಿತ ಮೆಲಕು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭವನ್ನು ಜಿ.ಪಂ. ಸದಸ್ಯೆ ಶಶಿಕಲಾ ರಾಜೇಂದ್ರ ಸಣ್ಣಕ್ಕಿ ಅವರು ಉದ್ಘಾಟಿಸಿದರು. ಪ್ರೋ. ಚಂದ್ರಶೇಖರ ಅಕ್ಕಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾನಿಧ್ಯವನ್ನು ಇಲ್ಲಿಯ ಶೂನ್ಯ ಸಂಪಾದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆ ಮೇಲೆ ದಾವಣಗೇರಿಯ ಲೇಖಕ ಎಮ್.ಆರ್.ದೊರೆಸ್ವಾಮಿ, ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ರಜನಿ ಜೀರಗ್ಯಾಳ, ಸಾಹಿತಿ ಮಹಾಲಿಂಗ ಮಂಗಿ, ರಾಜೇಶ್ವರಿ ಒಡೆಯರ, ಎಮ್.ಪಿ.ಮಲ್ಲೇಶ, ವಿವೇಕ ಜತ್ತಿ ಇದ್ದರು.
ಪ್ರವಚನ ರತ್ನ ಬಸವರಾಜ ರಾಮಗಾನಟ್ಟಿ ಸ್ವಾಗತಿಸಿ ನಿರೂಪಿಸಿದರು. ಚುಟುಕು ಸಾಹಿತಿ ಟಿ.ಸಿ.ಮೊಹರೆ ವಂದಿಸಿದರು.

Related posts: