RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ

ಘಟಪ್ರಭಾ:ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ 

ಪಶು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ರಾತ್ರಿಯಿಡಿ ಹಾರಾಡಿದ ರಾಷ್ಟ್ರ ಧ್ವಜ
ಘಟಪ್ರಭಾ ಜ 28 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದನಗಳ ಪೇಟೆಯಲ್ಲಿರುವ ಪಶು ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಣರಾಜ್ಯೋತ್ಸವದಂದು ಹಾರಿಸಿದ ರಾಷ್ಟ್ರ ಧ್ವಜ ಪೂರ್ತಿ ರಾತ್ರಿ ಹಾರಿದ ಘಟನೆ ಜರುಗಿದೆ.
ಪಟ್ಟಣದ ದನಗಳ ಪೇಟೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಧ್ವಜಾರೋಹಣ ನೆರವೇರಿಸಿ ತೆರಳಿದ ಅಧಿಕಾರಿಗಳು ಮರಳಿ ಆಸ್ಪತ್ರೆಗೆ ಬಂದು ಧ್ವಜವನ್ನು ಇಳಿಸಲೇ ಇಲ್ಲ. ನಿಯಮಾನುಸಾರ ಸಂಜೆ 6ಗಂಟೆಗೆ ಧ್ವಜವನ್ನು ಕೆಳಗಿಳಿಸಬೇಕೆಂಬ ನಿಯಮವಿದ್ದರೂ ಸಹ ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ.
ದಿ.27 ರಂದು ಮುಂಜಾನೆ ಅಕ್ಕ ಪಕ್ಕದ ಜನರು ರಾಷ್ಟ್ರ ಧ್ವಜ ಹಾರುತ್ತಿರುವುದನ್ನು ಗಮನಿಸಿ ಪಶು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಬ್ಬಂದಿಯ ಸಹಾಯದಿಂದ ಧ್ವಜವನ್ನು ಕೆಳಗಿಸಿದ್ದಾರೆ.

Related posts: