ಗೋಕಾಕ:ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ : ಎಸ್. ಎನ್. ಪೂಜಾರಿ
ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ : ಎಸ್. ಎನ್. ಪೂಜಾರಿ
ಗೋಕಾಕ ಜ 29 : ಇಂದಿನ ಆಧುನಿಕ ಜೀವನ ಶೈಲಿಯ ದಿನಗಳಲ್ಲಿಯೂ ಸಹ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವದು ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತದೆ ಎಂದು ನಿವೃತ್ತ ಬಿಇಓ ಎಸ್. ಎನ್. ಪೂಜಾರಿ ಹೇಳಿದರು .
ಇತ್ತೀಚೆಗೆ ನಗರದ ಡಾಲರ್ಸ ಕಾಲನಿಯಲ್ಲಿ ಜರುಗಿದ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ 1996-97 ನೇ ಸಾಲಿನ 10 ನೇ ತರಗತಿಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು
ಜ್ಞಾನ-ವಿಜ್ಞಾನ ವಿದ್ಯಾರ್ಥಿಗೆ ಎರಡು ಕಣ್ಣುಗಳು ಇದ್ದಂತೆ, ಜ್ಞಾನದಿಂದ ಸಮಾಜವನ್ನು, ವಿಜ್ಞಾನದಿಂದ ದೇಶವನ್ನು ಬೆಳಗಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ದಿನಗಳಲ್ಲಿನ ಸವಿನೆನಪುಗಳನ್ನು ಮೆಲಕು ಹಾಕುತ್ತ ವಿದ್ಯೆಯನ್ನು ದಾರೆ ಎರೆದ ಗುರುವೃಂದವನ್ನು ಸ್ಮರಿಸುವುದು ಶ್ಲಾಘನೀಯ ಕಾರ್ಯವಾಗಿದೆ. ತಮ್ಮ ದೈನಂದಿನ ಕಾರ್ಯಗಳೊಂದಿಗಗ ಜನಹಿತ ಕಾರ್ಯಗಳಲ್ಲಿ ತೊಡಗಿಸಿಕೊಂಡು ದೇಶದ ಒಳಿತಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಪೂಜಾರಿ ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಡಿ. ಬೇಗ ವಹಿಸಿದ್ದರು . ವೀರಭದ್ರಯ್ಯಾ ಮಠಪತಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎ. ಎ. ಬೆಣ್ಣಿ , ಶ್ರೀಮತಿ ಕಲಗುಡಿ , ಗುರುಗಳಾದ ಎಂ.ಪಿ. ಗಾಣಗಿ, ಎ ಕೆ ಜಮಾದಾರ, ಎಂ.ಎ. ಕೋತವಾಲ, ಎಂ.ಎಂ. ಹಾದಿಮನಿ, ಸಿ.ಎಸ್. ಮೇಗಲಮನಿ, ಎಂ.ಎ. ಬಾಗೇವಾಡಿ, ಗುರುಮಾತೆಯರಾದ ಎಸ್.ಎಂ. ಕಲಗುಡಿ, ಎಂ.ಆರ್. ಹರಿದಾಸ, ಎಸ್.ಎಸ್. ಮುನವಳ್ಳಿ, ಡಿ.ಸಿ. ಜುಗಳಿ, ಆರ್.ಕೆ. ಹಂದಿಗುಂದ, ಯು.ಕೆ. ವಿಭೂತಿ, ಸಿಬ್ಬಂದಿಯವರಾದ ಆರ್.ಎಲ್. ಬಬಲಿ, ಎಸ್.ಜಿ. ಆಲತಗಿ, ಎಚ್.ಎಂ. ಕಾಲೇಭಾಯಿ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು .
ಇರ್ಫಾನ ಶೇಖ ಮತ್ತು ಶಿವಾನಂದ ಶಿರಸಂಗಿ ಕಾರ್ಯಕ್ರಮವನ್ನು ನಿರೂಪಿಸಿದರು , ಆನಂದ ಹಿರೇಮಠ ವಂದಿಸಿದರು