RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ

ಘಟಪ್ರಭಾ:ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ 

ಸುಡುಗಾಡು ಸಿದ್ಧ ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ದೇವರಾಜ

ಘಟಪ್ರಭಾ ಜ 29 : ಸುಡುಗಾಡು ಸಿದ್ಧ ಸಮಾಜದವರು ಎಚ್ಚೆತ್ತಕೊಂಡು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸುಡುಗಾಡು ಸಿದ್ಧ ಮಹಾ ಸಂಘದ ರಾಜ್ಯಾಧ್ಯಕ್ಷ ದೇವರಾಜ ಹೇಳಿದರು.
ಅವರು ಸೋಮವಾರ ಸಮೀಪದ ಅರಭಾಂವಿ ಗ್ರಾಮದ ಸುಡುಗಾಡು ಸಿದ್ಧ ಓಣಿಯ ಸದಾಶಿವ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸುಡುಗಾಡು ಸಿದ್ಧ ಮಹಾ ಸಂಘದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡುತ್ತ, ಸುಡುಗಾಡು ಸಿದ್ಧ ಸಮಾಜ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿಬೇಕು. ಸರ್ಕಾರ ನಮ್ಮ ಸಮಾಜಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ ಆದರೆ ನಮ್ಮ ಜನರಿಗೆ ಆ ಸೌಲಭ್ಯಗಳ ತಲುಪುತ್ತಿಲ್ಲ ಆದರೆ ಸಂಘಟನೆಯ ಮೂಲಕ ನಾವು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಬಹುದು ಎಂದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಹಣಮಂತ್ತಪ್ಪಾ ಮಾತನಾಡಿ, ಸರ್ಕಾರ ಸುಡುಗಾಡು ಸಿದ್ಧ ಸಮಾಜಕ್ಕೆ ಸರ್ಕಾರಿ ಕೆಲಸಗಳಲ್ಲಿ ಪ್ರತ್ಯೇಕ ಮೀಸಲಾತಿಯನ್ನು ನೀಡುವ ಜೊತೆಗೆ ನಿಗಮ ಮಂಡಳಿಗಳಿಗೆ ನಮ್ಮ ಸಮಾಜದ ಪ್ರತಿಭಾವಂತ ಯುವಕರನ್ನು ನೇಮಿಸುವ ಮೂಲಕ ರಾಜಕೀಯವಾಗಿ ಮುಂದೆ ತರುವ ಪ್ರಯತ್ನವನ್ನು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸರ್ವ ಸಮ್ಮತದಿಂದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಗೌರವ್ವಧ್ಯಕ್ಷರಾಗಿ ಸಿದ್ರಾಮ ರಾ.ಸಂಗಮನವರ, ಜಿಲ್ಲಾಧ್ಯಕ್ಷರಾಗಿ ನಾಗಪ್ಪಾ ಈ. ಹೊಲದವರ, ಉಪಾಧ್ಯಕ್ಷರಾಗಿ ಡಿ.ಡಿ.ಕಿನ್ನೂರಿ, ಉಪಾಧ್ಯಕ್ಷರಾಗಿ ಸಾಬಣ್ಣಾ ಘಂಟಿ, ಪ್ರಧಾನ ಕಾರ್ಯದರ್ಶಿಯಾಗಿ ವೀರಣ್ಣಾ ರಾ. ಸಂಗಮನವರ, ಖಜಾಂಚಿಯಾಗಿ ಭೀಮಪ್ಪಾ ಘಂಟಿ, ಜಂಟಿ ಕಾರ್ಯದರ್ಶಿ ಜಗದೀಶ ಸಿದ್ದಯನವರ, ಧರ್ಮಪ್ಪಾ ಒಂಟೆತ್ತನವರ, ಸಂಘಟನಾ ಕಾರ್ಯದರ್ಶಿಯಾಗಿ ಧರ್ಮಪ್ಪಾ ಸಂಕನ್ನವರ ಇವರನ್ನು ಆಯ್ಕೆ ಮಾಡಲಾಯಿತು.
ರಾಯಬಾಗ ಸ್ಟೇಷನ ಗ್ರಾ.ಪಂ ಸದಸ್ಯ ರಾಜು ಸಿದ್ದಯನವರ ಹಾಗೂ ಈರಪ್ಪಾ ಹೊಲದವರ ಇವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಶಿವಲಿಂಗ ಸಿದ್ದಯನವರ, ಹಣಮಂತ ಪತಾಗಿರಿ, ಹಾಲಪ್ಪ ವೇಷಧಾರಿ, ದುರ್ಗಾಜಿ ಕೋಮಾರಿ, ಶಿವಾಜಿ ಪತಾಗಿರಿ, ಸ್ವಾಮಿ ಕೋಮಾರಿ, ಭೀಮಪ್ಪಾ ಸಿದ್ದಯನವರ, ಸಾರೆಪ್ಪ ಕೋಮಾರಿ, ಶಂಕರ ಮುಗ್ಗನವರ, ದುಗ್ಗಪ್ಪಾ ಕುಗಡಿ, ಯಲ್ಲಪ್ಪಾ ಹೊಲದವರ, ಭೀಮವ್ವಾ ಹಾವಿನವರ, ಲೋಕೇಶ ತೋಟದ, ಗಂಗಪ್ಪಾ ಗಂಟೆನ್ನವರ, ರಮೇಶ ಸಂಕದ ಮಂಜುನಾಥ ಚಿಕ್ಕಮಂಗಳೂರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related posts: