ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಗ್ರಾಮಸ್ಥರ ಸಹಕಾರ ಮುಖ್ಯ-ಕುದರಿ
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಗ್ರಾಮಸ್ಥರ ಸಹಕಾರ ಮುಖ್ಯ-ಕುದರಿ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜ 31 :
ಕುಷ್ಠ ರೋಗವೂ ಒಂದು ರೋಗ ಪಾಪ ಅಥವಾ ಶಾಪವಲ್ಲ ಎಂದು ಹಿರಿಯ ಆರೋಗ್ಯ ಸಹಾಯಕರಾದ ಪಿ.ಎಸ್.ಕುದರಿ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ ಸ್ಪರ್ಶ ಕುಷ್ಠರೋಗ ಪಾಕ್ಷಿಕ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕುಷ್ಠರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸಲಹೆ ಮತ್ತು ಚಿಕಿತ್ಸೆ ದೊರೆಯುತ್ತದೆ. ಸಮಾಜವನ್ನು ಕುಷ್ಠರೋಗ ಮುಕ್ತ ಮಾಡುವುದು ಮತ್ತು ಕುಷ್ಠರೋಗವೂ ಎಲ್ಲ ರೋಗಗಳಂತೆಯೇ ಒಂದು ರೋಗ. ಪ್ರಾರಂಭದಲ್ಲಿಯೇ ಈ ರೋಗವನ್ನು ಪತ್ತೆ ಹಚ್ಚಿ ಬಹು ವಿಧ ಔಷಧಿ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಿಂದ ಹಾಗೂ ರೋಗದಿಂದ ಸಂಪೂರ್ಣ ಗುಣಪಡಿಸಲು ಸಾಧ್ಯವಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಗ್ರಾಮಸ್ಥರು ಕೈಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ವಿಠ್ಠಲ ಕಾಶಪ್ಪಗೋಳ, ಗ್ರಾ.ಪಂ ಲೆಕ್ಕಾಧಿಕಾರಿ ವಿಠ್ಠಲ ಕುಳ್ಳೂರ, ಶಿವಪ್ಪ ಶಿರಹಟ್ಟಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಬಿ.ಕಾಳ್ಯಾಗೋಳ, ಬಿ.ಬಿ.ಬಿಳಗಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.