ಗೋಕಾಕ:ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು
ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 3 :
ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು. ಮನೆತನದ ಗೌರವ ಹೆಚ್ಚಿಸುವಂತಹ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.
ಅವರು ರವಿವಾರದಂದು ಸಂಜೆ ನಗರದ ಶೂನ್ಯ ಸಂಪಾದನಾ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ 14ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ ಮತ್ತು ಮಹಿಳಾ ಸಮಾವೇಶದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆಗೈದಿದ್ದಾರೆ. ಮಹಿಳೆ ವೀರಳು,ಶೂರಳು, ಧೈರ್ಯವಂತಳಾಗಿದ್ದಾಳೆ. ಇಂದಿನ ಯುಗದಲ್ಲಿ ಮಹಿಳೆಯರು ವೇಷ ಭೂಷಣದಲ್ಲಿ ನಿರತರಾಗಿ ಸಂಸ್ಕøತಿಯನ್ನು ಮರೆತಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಗೆ ಉನ್ನತ ಸ್ಥಾನ ಇದೆ. ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಮಹಿಳೆಯರ ಕೊಡುಗೆ ಅಪಾರವಾಗಿದೆ.
ಶರಣ ಸಂಸ್ಕøತಿಯು ಬಹಳ ಮಹತ್ವದ್ದಾಗಿದೆ. ನಿತ್ಯ ಮುಕ್ತಿ ಪಡೆಯುವವನೇ ಶರಣ. ಶರಣ ಸ್ಥಲಕ್ಕೆ ಭಕ್ತನೇ ಆಧಾರ. ವೀರಶೈವ ಸಂಸ್ಕøತಿ ಕಲಿಸಬೇಕು. ಹಿಂದಿನ ಕಾಲದಿಂದಲೂ ಶರಣ ಸಂಸ್ಕøತಿಗೆ ಮಹತ್ವ ನೀಡುತ್ತಾ ಬಂದಿದ್ದಾರೆ, ನಡೆ,ನುಡಿ,ತನು, ಭಾವ ಇದ್ದವನೇ ಶರಣ. ಮನುಷ್ಯನ ಜೀವನವನ್ನು ಶುದ್ಧಗೊಳಿಸಬೇಕಾದರೆ ಶರಣ ಸಂಸ್ಕøತಿ ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಬೆಂಗಳೂರಿನ ಸಣ್ಣ ಮಕ್ಕಳ ಹೃದಯ ತಜ್ಞರಾದ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ ಸುಸಂಸ್ಕøತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ.ಹೆಣ್ಣು ಪ್ರಕೃತಿಯಾಗಿದ್ದಾಳೆ. ಉತ್ಕøಷ್ಠ ಸಮಾಜದಲ್ಲಿ ತಾಯಿಯೇ ಸೇವೆ ಪ್ರಮುಖವಾಗಿದೆ. ಮೇಡಂ ಅನ್ನುವುದನ್ನು ಬಿಟ್ಟು ತಾಯಿ,ಅಕ್ಕ ತಂಗಿ ಅನ್ನುವಂತಹ ಕಾರ್ಯವಾಗಬೇಕು. ಮಹಿಳೆಯರು ಶಿಕ್ಷಣವಂತರಾದರೇ ಭವ್ಯ ಭಾರತದ ನಿರ್ಮಾಪಕರಾಗುತ್ತಾರೆ. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಶರಣ ಸಂಸ್ಕøತಿ ನೀಡಬೇಕು. ತಾಯಿಗೆ ಮರ್ಯಾದೆ ನೀಡಬೇಕು. ತಾಯಿಗೆ ಅದ್ಭುತವಾದ ಶಕ್ತಿ ಇದೆ.
ಭ್ರೂಣ ಹತ್ಯೆ ಮಹಾಪಾಪ ಅದನ್ನು ತಡೆಯಲು ಇಂದು ಮಹಿಳೆಯರು ಮುಂದಾಗಬೇಕು. ಸಮಾಜದಲ್ಲಿ ಭ್ರೂಣ ಹತ್ಯೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯ ಮಹಿಳೆಯರು ಮಾಡಬೇಕು.ಹೆಣ್ಣು ಭ್ರೂಣ ಹತ್ಯೆ ಮಾಡಿದರೇ ಅದು ಬ್ರಹ್ಮಾಂಡ ಹತ್ಯೆ ಎಂದು ತಿಳಿಯಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ,ಸಂಸ್ಕಾರ ನೀಡಿ ಅವರನ್ನು ಸಮಾಜಮುಖಿಗೆ ಬರಬೇಕು ಅಂದಾಗ ಮಾತ್ರ ಭಾರತದ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಸಮಾರಂಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹಾಗೂ ನೇತೃತÀವನ್ನು ಘಟಪ್ರಭಾ ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ ವಹಿಸಿದ್ದರು.
ವೇದಿಕೆ ಮೇಲೆ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮೀನಾಕ್ಷಿ ಎಸ್. ಬಾನಿ, ಶಿರೀಷಾ ಎ., ಡಾ. ಸೀಮಾ ಮಾಸೂರಕರ, ಸುನಂದಾ ಕರದೇಸಾಯಿ, ರಾಜೇಶ್ವರಿ ಈರನಟ್ಟಿ, ರೂಪಾ ಮುನವಳ್ಳಿ, ರಾಜೇಶ್ವರಿ ಬೆಟ್ಟದಗೌಡರ, ಮಲ್ಲಿಕಾರ್ಜುನ ಕಲ್ಲೋಳ್ಳಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಾಧನೆಗೈದ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಾದ ಶಕುಂತಲಾ ದಂಡಗಿ, ವೆಂಕವ್ವ ಶಾಸ್ತ್ರಿಗೊಲ್ಲರ, ಸುಶ್ಮೀತಾ ಕಿಶೋರಭಟ್, ಡಾ. ಅರುಣಾ ತುಪ್ಪದ, ಭಾರತಿ ಮದಭಾಂವಿ, ಚಂದ್ರಕಲಾ ಹೆಗಡೆ, ರೇಖಾ ಕ್ಯಾಸ್ತಿ, ಆರತಿ ಗುಗ್ಗವಾಡ, ಈರವ್ವ ಹಿರೇಮಠ, ಮಂಜುಳಾ ಹಿರೇಮಠ, ಜಯಶ್ರೀ ಗುರ್ಲಹೊಸೂರ ಅವರನ್ನು ಸತ್ಕರಿಸಲಾಯಿತು.
ಅಮ್ಮಾಜಿ ನೃತ್ಯ ಶಾಲೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.
ಆರ್.ಎಲ್.ಮಿರ್ಜಿ ಸ್ವಾಗತಿಸಿದರು. ಎಸ್.ಕೆ.ಮಠದ ನಿರೂಪಿಸಿದರು. ಅಡಿವೇಶ ಗವಿಮಠ ವಂದಿಸಿದರು.