RNI NO. KARKAN/2006/27779|Saturday, October 19, 2024
You are here: Home » breaking news » ಅಥಣಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ

ಅಥಣಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ 

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ
ನಮ್ಮ ಬೆಳಗಾವಿ ಸುದ್ದಿ , ಅಥಣಿ ಫೆ 4 :
ಸರಕಾರವು ಹಾಜರಾತಿ, ಶಿಕ್ಷಣ ಪೂರ್ಣಗೋಳಿಸಲು, ಪ್ರಜ್ಞಾವಂತ ಸಮಾಜ ನಿರ್ಮಿಸುವ ದೃಷ್ಠಿಯಿಂದ ಅನೇಕ ಪ್ರೋತ್ಸಾಹಕ ಯೋಜನೆಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು , ಪಾಲಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು ಎಂದು ಎಸ್.ಎಸ್.ಎಮ್.ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ ಮಲ್ಲಮ್ಮ ಯಾದಗಲ ಹೇಳಿದರು.
ಅವರು ಸ್ಥಳೀಯ ಮೇಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಜರುಗಿದ ಬಿಳ್ಕೋಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರೌಢ ಶಾಲಾ ಹಂತದ ನಂತರ ಸತತವಾಗಿ ಕಾಲೇಜುಗಳಿಗೆ ಗೈರು, ಬಾಲ್ಯ ವಿವಾಹ, ಬಾಲಕಾರ್ಮಿಕರಾಗುವರು ಅಂತಹವರನ್ನು ಗುರುತಿಸಿ ತಿಳುವಳಿಕೆ ನೀಡಿ ಸಹಾಯ ನೀಡಬೇಕು. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು ಸಮಯದ ಸದುಪಯೋಗ ಮಾಡಿಕೊಂಡು ಭವ್ಯ ಜೀವನ ರೂಪಿಸಿಕೊಳ್ಳಬೇಕು. ವಸತಿ ನಿಲಯದ ಪ್ರಯೋಜನ ಪಡೆದು ಮಾದರಿ ಬದುಕು ತಮ್ಮದಾಗಿಸಿಕೊಂಡು ದೇಶದ ಒಳ್ಳೇಯ ಪ್ರಜೆಗಳಾಗಬೇಕೆಂದು ಕಿವಿ ಮಾತು ಹೇಳಿದರು.
ಅರ್ಥಶಾಸ್ತ್ರ ಪ್ರಾಧ್ಯಾಪಕ ಎಮ್.ಬಿ ಅಥಣಿ ಮಾತನಾಡಿ, ವಿದ್ಯೆ ಎಂಬ ಕಿರೀಟಕ್ಕೆ ವಿನಯ ಎಂಬ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವದು ಅತ್ಯಾವಶ್ಯಕ. ಭಾರತೀಯ ಸಮಾಜದಲ್ಲಿ ಹೆಣ್ಣು ತಲೆ ಎತ್ತಿ ನಿಲ್ಲ ಬೇಕಾದರೆ ಶಿಕ್ಷಣ ಅವಶ್ಯಕವಾಗಿದೆ. ಶಿಕ್ಷಣದಿಂದ ಮಾತ್ರ ಸ್ವಾವಲಂಬಿ ಜೀವನ ಸಾಧ್ಯ ಎಂದು ನುಡಿದರು.
ಪ್ರಾಸ್ತಾವಿಕವಾಗಿ ನಿಲಯ ಪಾಲಕರಾದ ಪಿ.ಎಸ್ ಮಲಗೌಡರ ಮಾತನಾಡಿ, ವಸತಿ ನಿಲಯದ ಪ್ರಯೋಜನಗಳು ಹಾಗೂ ಮುಂದಿನ ಶೈಕ್ಷಣಿಕ ರೂಪು ರೇಷೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಜೆ.ಎ ಕಾಲೇಜಿನ ಆಂಗ್ಲ ಪ್ರಾದ್ಯಾಪಕ ಚಂದ್ರಶೇಖರ, ಕನ್ನಡ ಪ್ರಾಧ್ಯಾಪಕ ಪಿ.ವಿ ಹಿರೇಪಠ, ಎಸ್.ಎಮ್ ಚಿಂಚೋಳಿಮಠ, ಪೋಲಿಸ್ ಇಲಾಖೆಯ ಪಿ.ಎಸ್ ಮಲಗೌಡರ, ಎಸ್.ಎಚ್ ಬಿರಾದಾರ, ನೇತ್ರಾವತಿ ಭಜಂತ್ರಿ, ಲಕ್ಷ್ಮೀ ಕುಲಗೂಡೆ, ಸಾವಿತ್ರಿ ನಾಯಕರ, ಸವಿತಾ ಶಿಂದೆ, ರಾಜೇಶ್ವರ ಪಾಟೀಲ, ಸುರೇಖಾ ಕುಂಬಾರ, ರಾಬಿಯಾ ಬಡೆವಾಲಿ ಹಾಗೂ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾರಂಭವನ್ನು ಪ್ರೇಮಾ ಬೋರಗಾಂವೆ ನಿರೂಪಿಸಿದರು. ಅಕ್ಷತಾ ಪೂಜಾರಿ ಸ್ವಾಗತಿಸಿ, ಪ್ರತಿಭಾ ಕಿರಣಗಿ ವಂದಿಸಿದರು.

Related posts: