ಗೋಕಾಕ:ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ
ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 4 :
ಶಾಲೆಯೊಂದು ಸಮಗ್ರ ಅಭಿವೃದ್ಧಿ ಸಾಧಿಸಲು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಹಾಗೂ ಪಾಲಕರ ಸಹಾಯ, ಸಹಕಾರ ಅತ್ಯಂತ ಮಹತ್ವದಾಗಿದೆ ಎಂದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ ಹೇಳಿದರು.
ಮೂಡಲಗಿ ಬಿಇಒ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಬೆಟಗೇರಿ ಸಿಆರ್‍ಸಿ ಇವರ ಸಹಯೋಗದಲ್ಲಿ ಗುರುವಾರ ಜ.31 ರಂದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಸ್ಥಳೀಯ ಸಿಆರ್‍ಸಿ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಶಾಲೆಗಳ ಎಸ್‍ಡಿಎಮ್‍ಸಿ ಅಧ್ಯಕ್ಷ ಮತ್ತು ಸದಸ್ಯರ 2 ದಿನದ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ, ಎಸ್‍ಡಿಎಮ್‍ಸಿ ಅಧ್ಯಕ್ಷ ಮತ್ತು ಸದಸ್ಯರು ಶಾಲೆಯ ಏಳ್ಗಿಗೆ ನಿರ್ವಹಿಸಬೇಕಾದ ಹಲವಾರು ಅಂಶಗಳ ಕುರಿತು ತಿಳಿಸಿದರು.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಶಿಕ್ಷಕ ವೈ.ಸಿ.ಶೀಗಿಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಮ್.ಬಿ.ಕಳ್ಳಿಗುದ್ದಿ ಅವರು ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ನೆರವೇರಿಸುವುದರ ಮೂಲಕ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಸಿಆರ್‍ಸಿ ಬಿ.ಟಿ.ಪುಂಜಿ, ಗಂಡು ಮಕ್ಕಳ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ಉದ್ದಪ್ಪ ಚಂದರಗಿ, ಮುಖ್ಯ ಶಿಕ್ಷಕರಾದ ಬಿ.ಎ.ಕೋಟಿ, ಎ.ಎಮ್.ನರ್ಗಾಶಿ, ಆರ್.ಎಸ್.ಕಲ್ಲಪ್ಪನ್ನವರ, ಐ.ಸಿ.ಕೊಣ್ಣೂರ, ಡಿ.ಎಮ್ ಬೊಳಯತ್ತಿನ, ಬಿ.ಎ.ಉಪ್ಪಾರಟ್ಟಿ, ಬೆಟಗೇರಿ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಶಾಲೆಗಳ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಮುಖ್ಯಾಧ್ಯಾಪಕರು, ಶಿಕ್ಷಕರು, ಇತರರು ಇದ್ದರು.