ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ
ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ
ನಿಪ್ಪಾಣಿ ಜು 3: ಅಕ್ರಮವಾಗಿ ಮಹಾ ರಾಜ್ಯಕ್ಕೆ ಸಾಗಿಸುತ್ತಿದ ಸುಮಾರು 20 ಟನ್ ಅನ್ನಭಾಗ್ಯ ಯೋಜನೆರ ಅಕ್ಕಿಯನ್ನು ನಿಪ್ಪಾಣಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ
ಅಕ್ಕಿಯನ್ನು ಹಾವೇರಿಯಿಂದ ಮಹಾರಾಷ್ಟ್ರದ ಸೋಲ್ಹಾಪುರಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 20 ಟನ್ ಅನ್ನಭಾಗ್ಯ ಅಕ್ಕಿಯನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ
ಚಾಲಕ ಆನಂದ ಪೋಕಳೆ, ಕ್ಲೀನರ್ ರವೀಂದ್ರ ಕರ್ಜೆ, ಶಮಾದಾನ ಶಂಕರ ಮೋಠೆ ಬಂಧಿತ ಆರೋಪಿಗಳು