RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ

ಗೋಕಾಕ:ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ 

ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 :
ಕೇಂದ್ರ ಸರ್ಕಾರ ಜಾರಿಗೊಳಿಸಿದ ಫಸಲ ಭೀಮಾ ವಿಮಾಯೋಜನೆ ಅಂಬಾನಿ,ಆದಾನಿ ಅವರ ಲಾಭಕ್ಕಾಗಿ ಮಾಡಿದ ಯೋಜನೆಯಾಗಿದ್ದು ರೈತರಿಗೆ ಪೂರಕವಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.
ಅವರು ಮಂಗಳವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿ ಬರಗಾಲ ವಿದ್ದರೂ ವಿಮೆ ಯಾರಿಗೂ ತಲುಪಿಲ್ಲ. ಕಬ್ಬು ಬೆಳೆಗಾರರರಿಗೆ ಎಫ್ ಆರ್ ಪಿ ಯಿಂದ ಅನ್ಯಾಯವಾಗಿದೆ. ಕಾರ್ಖಾನೆಯವರಿಗೆ ಐದು ಸಾವಿರ ಕೋಟಿ ನೆರವು ನೀಡಿ ರೈತರನ್ನು ಕಡೆಗಣಿಸಲಾಗಿದೆ. ರೈತರ ಪರ ಬಜೆಟ್ ಎಂದು ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಡಿಯೂರಪ್ಪನವರಿಗೆ ಇದ್ದಷ್ಟು ಕಾಳಜಿ ಇಲ್ಲ. ರೈತರಿಗೆ ಆರು ಸಾವಿರ ನೀಡುತ್ತೇವೆ ಎಂದು ಅಪಮಾನ ಮಾಡಿದ್ದಾರೆ. ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಎರಡು ದಿನದರೊಳಗೆ ಅವರನ್ನು ಭೇಟಿಯಾಗಿ ಹೋರಾಟವನ್ನು ತೀವೃಗೊಳಿಸುವಂತೆ ವಿನಂತಿಸಲಾಗುವುದು ಎಂದರಲ್ಲದೇ ಇಂದಿನ ಸರ್ಕಾರಗಳು ಬ್ರಿಟಿಷರಿಗಿಂತ ಕೆಟ್ಟ ಮನಸ್ಸಿನಂತೆ ವರ್ತಿಸುತ್ತಿದ್ದಾವೆ. ಶಾಸಕರ ರೆಸಾರ್ಟ ರಾಜಕೀಯವನ್ನು ಖಂಡಿಸಿದ ಅವರು ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ತಪ್ಪನ್ನು ತಿದ್ದಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಬೇಕು ಇಲ್ಲದಿದ್ದರೆ ಅವರಿಗೆ ಸಗಣಿ ಹಾಗೂ ಪೂರಕೆ ಸೇವೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಸತ್ತೇಪ್ಪ ಮಲ್ಲಾಪೂರೆ, ಉಪಾಧ್ಯಕ್ಷರಾಗಿ ಗೋಪಾಲ ಕೊಕನೂರ, ರಮೇಶ ಮಡಿವಾಳ, ಕಾರ್ಯಾಧ್ಯಕ್ಷರಾಗಿ ರವಿ ಸಿದ್ದಪ್ಪನವರ, ಪ್ರಧಾನ ಕಾರ್ಯದರ್ಶಿಯಾಗಿ ಭರಮು ಖೇಮಲಾಪೂರೆ, ಕಾರ್ಯದರ್ಶಿಗಳಾಗಿ ಮಲ್ಲು ದೇಸಾಯಿ. ಕೇಶವ ಮಳಲಿ, ಜಿಲ್ಲಾ ಸಂಚಾಲಕರಾಗಿ ಮಂಜುನಾಥ ಪೂಜೇರಿ, ರಾಜ್ಯ ಮುಖಂಡರಾಗಿ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮಲ್ಲಿಕಾರ್ಜುನ ರಾಮದುರ್ಗ ಅವರನ್ನು ನೇಮಕ ಮಾಡಲಾಯಿತು.

Related posts: