RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕು : ಡಿ.ಎಮ್.ದಳವಾಯಿ

ಘಟಪ್ರಭಾ:ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕು : ಡಿ.ಎಮ್.ದಳವಾಯಿ 

ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕು : ಡಿ.ಎಮ್.ದಳವಾಯಿ

ನಮ್ಮ ಬೆಳಗಾವಿ ಸುದ್ದಿ ,  ಘಟಪ್ರಭಾ ಫೆ 6 :

ಸಾರ್ವಜನಿಕರು ಸರಕಾರದಿಂದ ನಿರ್ಮಿಸಲಾಗುವ ಸಾರ್ವಜನಿಕ ಶೌಚಾಲಯಗಳ ಸರಿಯಾಗಿ ಉಪಯೋಗಿಸಬೇಕೆಂದು ಹಿರಿಯರಾದ ಡಿ.ಎಮ್.ದಳವಾಯಿ ಹೇಳಿದರು.
ಅವರು ಮಂಗಳವಾರದಂದು  ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 7 ನೇ ಹಾಗೂ 11 ನೇ ವಾರ್ಡಿನಲ್ಲಿ 14 ನೇ ಹಣಕಾಸು ಯೋಜನೆಯ 2018-19 ನೇ ಸಾಲಿನ ಸಾಮಾನ್ಯ ಮೂಲ ಅನುದಾನದಲ್ಲಿ ಕನ್ನಡ ಶಾಲೆ ಹತ್ತಿರ ಹಾಗೂ ಉರ್ದು ಶಾಲೆ ಹತ್ತಿರ ಮತ್ತು ಮುತ್ತೆಪ್ಪನ ಮನೆಯ ಹತ್ತಿರ ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತ ಶೌಚಾಲಯದ ಜೊತೆಗೆ ಅದರ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಛ್ಚವಾಗಿಟ್ಟು ಸರಕಾರದ ಸೌವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಪ.ಪಂ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಮಲ್ಲೇಶ ಕೋಳಿ. ಮುಸ್ಲೀಂ ಸಮಾಜದ ಹಿರಿಯರಾದ ಸುಲ್ತಾನಸಾಬ ಕಬ್ಬೂರ, ನೂರ ಪೀರಜಾದೆ, ಶಬೀರ ಜಮಖಂಡಿ, ಹಾಜಿ ಅಹ್ಮದಹುಸೇನ ಬಾಗವಾನ, ಕೆ.ಎಮ್ ಬಾಗವಾನ, ಮದಾರ ನಾಲಬಂದ, ತನವೀರ ನಾಲಬಂದ, ಮೌಲಾಲಿ ಬಾಗವಾನ, ಗೌಸಖಾನ ಕಿತ್ತೂರಕರ, ಶಿಕ್ಷಕರಾದ ಡಿ.ಕೆ.ಜಮಾದಾರ, ಎಸ್.ಡಿ.ಹಂಚಿನಾಳ, ಗ್ರಾಮಸ್ಥರಾದ ಸುರೇಶ ಪೂಜಾರಿ, ದಯಾನಂದ ಗುಡಾಜ, ಹಣಮಂತ ಕರೇವಗೋಳ, ಎಸ್.ಬಿ.ಬಿದರಿ, ಗುತ್ತಿಗೆದಾರ ಪರಶುರಾಮ ಗಾಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: