RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ:ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ 

ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 6 :

ವಾರ್ಡ ನಂ. 22 ರಲ್ಲಿ ಮುಲ್ಲಾ ಅವರ ಮನೆಯಿಂದ ಬ್ಯಾಂಕ್ ಆಫ್ ಬರೋಡಾವರೆಗೆ ಅವೈಜ್ಞಾನಿಕವಾಗಿರುವ ರಸ್ತೆ ಮತ್ತು ಗಟಾರು ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯಿಸಿದರು.
ಬುಧವಾರದಂದು ನಗರ ಸಭೆ ಆವರಣದಲ್ಲಿ ಸೇರಿದ ಕ.ರ.ವೇ. ಕಾರ್ಯಕರ್ತರು ನಗರ ಸಭೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿ ನಗರ ಸಭೆಯ ಸಮುದಾಯ ಸಂಘಟಕರಾದ ಗಣಾಚಾರಿ ಮತ್ತು ಕಿರಿಯ ಅಭಿಯಂತರರು ಎಸ್. ಎದ್. ಗಿಡದ ಹುಬ್ಬಳ್ಳಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತರಿಗೆ ಪ್ರತ್ಯೇಕ ಮನವಿ ಸಲ್ಲಿಸದರು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಗರ ಸಭೆ ನಗರೋತ್ಥಾನ (ಮುನಸಿಪಾಲ್ಟಿ)-3ನೇ ಹಂತದ ಪರಿಷ್ಕøತ ಕ್ರಿಯಾಯೋಜನೆಯಡಿಯಲ್ಲಿ ಹಳೆಯ ವಾರ್ಡ ನಂ. 22 ಹೊಸವಾರ್ಡ ನಂ. 21 ರಲ್ಲಿ ಮುಲ್ಲಾ ಅವರ ಮನೆಯಿಂದ ಬ್ಯಾಂಕ ಆಫ್ ಬರೋಡಾವರೆಗೆ ಸುಮಾರು 430 ಮೀಟರು ಗಟಾರು ಮತ್ತು 430 ಮೀ. ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆಗೊಂಡು ಗುತ್ತಿಗೆದಾರರು ಕಳೆದ ಅಕ್ಟೋಬರ್‍ನಲ್ಲಿ ರಸ್ತೆ ಹಾಗೂ ಗಟಾರು ನಿರ್ಮಿಸಿದ್ದಾರೆ. ಆದರೆ ಮುಖ್ಯ ರಸ್ತೆಯ ಎರಡೂ ಬದಿಗೆ ನಿರ್ಮಿಸಬೇಕಾದ ಗಟಾರನ್ನು ನಿರ್ಮಿಸಿದೇ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಈ ಗಟಾರು 80 ಸೆಂ.ಮೀ. ಅಗಲ ಮತ್ತು ಎರಡೂ ಬದಿಗೆ ನಿರ್ಮಿಸಬೇಕು. ಇದಕ್ಕಾಗಿ ಈ ಯೋಜನೆಗೆ ಸುಮಾರು 38,92,296-00 ರೂ. ಗಳನ್ನು ಖರ್ಚು ಮಾಡಲಾಗಿದೆ. ಆದರೆ ಕಾಮಗಾರಿಯ ವಿವರದಲ್ಲಿರುವ ಹಾಗೆ ಈ ಗಟಾರುಗಳು ನಿರ್ಮಾಣವಾಗದೇ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿವೆ. ಇದಲ್ಲದೇ 430 ಮೀಟರ ಉದ್ದದ ಕಾಂಕ್ರೀಟ್ ರಸ್ತೆಯೂ ಸಹ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಕಾಮಗಾರಿಯ ಮಾಹಿತಿಯ ಪ್ರಕಾರ ರಸ್ತೆ ನಿರ್ಮಿಸುವ ಮೊದಲು ರಸ್ತೆಯ ಮೇಲಿನ ಮಣ್ಣನ್ನು ತೆಗೆದು ನೀರು ಬಡೆಯಬೇಕು. ಹಾಗೇ ಮಾಡಿದ ನಂತರ 8-10 ಪಾವರ್ ರೂರಲ್ ಹಾಕಿ ರಸ್ತೆಯ ಮೇಲೆ ಓಡಿಸಬೇಕು. ಅಗಲ 13.5 ಫೂಟ ರಸ್ತೆ, ರಸ್ತೆ ಮಾಡುವ ಮೊದಲು ಬೆಡ್ 2.5 ಇಂಚ ರಸ್ತೆ ಮಾಡಿ 6 ಇಂಚ ರಸ್ತೆ ನಿರ್ಮಾಣಮಾಡಬೇಕು. ಇದಕ್ಕಾಗಿ ಈ ಯೋಜನೆಯಲ್ಲಿ ಸುಮಾರು 15,53,707-00 ರೂ.ಗಳು ಬಿಡುಗಡೆಗೊಂಡಿದ್ದು, ರಸ್ತೆಯನ್ನು ನಿರ್ಮಿಸಿದ ಒಂದೇ ತಿಂಗಳಿನಲ್ಲಿ ರಸ್ತೆಯು ಕಿತ್ತು ಹೋಗಿದೆ. ನಂತರ ಅದನ್ನು ಪ್ಯಾಚವರ್ಕ ಮಾಡಿ, ಸಣ್ಣ ಪ್ರಮಾಣದ ಡಾಂಬರೀಕರಣ ಮಾಡಲಾಗಿದೆ. ಆದರೂ ಸಹ ಈ ರಸ್ತೆ ಗುಣಮಟ್ಟವನ್ನು ಹೊಂದಿಲ್ಲ. ಗುತ್ತಿಗೆದಾರರು, ಸಮಾಲೋಚಕರ ಮಾನಸ ಕನ್ಸಲ್ಟಂಟ್, ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಕಿರಿಯ ಅಭಿಯಂತರರು ಸೇರಿ ಈ ಕಾಮಗಾರಿಯನ್ನು ಮೂರನೇಯವರಿಗೆ ನೀಡಿ ಗಟಾರು ಮತ್ತು ರಸ್ತೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ.
ಈ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಆದಷ್ಟು ಬೇಗ ರಸ್ತೆ ಮತ್ತು ರಸ್ತೆಯ ಎರಡೂ ಬದಿಯ ಗಟಾರುಗಳನ್ನು ಮರು ನಿರ್ಮಾಣ ಮಾಡಬೇಕೆಂದು ಕ.ರ.ವೇ. ಸಮಸ್ತ ಸಾರ್ವಜನಿಕರ ಪರವಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.
ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಬೆಳಗಾವಿಯ ಲೋಕಾಯುಕ್ತರ ಕಛೇರಿ ಎದುರು ಉಗ್ರ ಪ್ರತಿಭಟಿಸಲಾಗುವುದೆಂದು ಈ ಮನವಿಯ ಮೂಲಕ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾಧಿಕ ಹಲ್ಯಾಳ, ದೀಪಕ ಹಂಜಿ, ರಮೇಶ ಕಮತಿ, ಅಶೋಕ ಬಂಡಿವಡ್ಡರ, ಮಲ್ಲು ಸಂಪಗಾರ, ಲಕ್ಷ್ಮಣ ಗೊರಗುದ್ಧಿ, ಮಲ್ಲಪ್ಪ ತಲೆಪ್ಪಗೋಳ, ಶೆಟ್ಟೆಪ್ಪ ಗಾಡಿವಡ್ಡರ, ಹನೀಫ ಸನದಿ, ರಾಮ ಸಣ್ಣಲಗಮನ್ನವರ, ಅಜರುದ್ದಿನ ಸನದಿ, ಮಂಜುನಾಥ ಪ್ರಭುನಟ್ಟಿ, ಬಸು ಗಾಡಿವಡ್ಡರ, ರಾಮ ಕುಡ್ಡೆಮ್ಮೆ, ಕಲ್ಲೋಳೆಪ್ಪ ಗಾಡಿವಡ್ಡರ, ನಿಂಗಣ್ಣವರ, ಗುರು ಮುನ್ನೋಳಿಮಠ, ಯಲ್ಲಪ್ಪ ಧರ್ಮಟ್ಟಿ, ಸಂತು ಕೋಲಕಾರ ಸೇರಿದಂತೆ ಇನ್ನೂ ಅನೇಕರ ಉಪಸ್ಥಿತರಿದ್ದರು.

Related posts: