RNI NO. KARKAN/2006/27779|Saturday, November 23, 2024
You are here: Home » breaking news » ಘಟಪ್ರಭಾ:ಪಾಲಕರು ತಮ್ಮ ಮಕ್ಕಳ ಆಸಕ್ತಿಯನ್ನು ಅರಿತು ಶಿಕ್ಷಣ ನೀಡಬೇಕು : ರಮೇಶ ಪಾಟೀಲ

ಘಟಪ್ರಭಾ:ಪಾಲಕರು ತಮ್ಮ ಮಕ್ಕಳ ಆಸಕ್ತಿಯನ್ನು ಅರಿತು ಶಿಕ್ಷಣ ನೀಡಬೇಕು : ರಮೇಶ ಪಾಟೀಲ 

ಪಾಲಕರು ತಮ್ಮ ಮಕ್ಕಳ ಆಸಕ್ತಿಯನ್ನು ಅರಿತು ಶಿಕ್ಷಣ ನೀಡಬೇಕು : ರಮೇಶ ಪಾಟೀಲ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 9 :

ಪಾಲಕರು ತಮ್ಮ ಮಕ್ಕಳ ಆಸಕ್ತಿಯನ್ನು ಅರಿತುಕೊಂಡು ಅವರಿಗೆ ಆ ಶಿಕ್ಷಣ ನೀಡಬೇಕು ಎಂದು ಘಟಪ್ರಭಾ ಪಿಎಸ್‍ಐ ರಮೇಶ ಪಾಟೀಲ ಹೇಳಿದರು.
ಅವರು ಶನಿವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ 30ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಸಮಾಜದಲಿ ಉತ್ತಮ ್ಲ ಪ್ರಜೆಗಳನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳು ತಾವು ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಕಲಿತ ಸಂಸ್ಥೆಯ ಹಾಗೂ ಶಾಲೆಗೆ ಕೀರ್ತಿ ತರಬೇಕೆಂದರು.
ಗೋಕಾಕ ಫಾಲ್ಸ್‍ನ ದಿ,ವೋಲ್ಕಾರ್ಡ ಆಕಾಡೆಮಿ ಪ್ರೌಢಶಾಲಾ ಶಿಕ್ಷಕ ಗಿರೀಶ ಸಾಂಗಲಿ ಮಾತನಾಡಿ ಮಕ್ಕಳಿಗೆ ತಾಯಿಯೇ ಮೊದಲು ಗುರುವಾಗಿದ್ದಾಳೆ. ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ತಾಯಿಯ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಮೊಬೈಲದಿಂದ ದೂರುಳಿದು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕದಿಂದ ಜ್ಞಾನ ಸಂಪಾದನೆಯಾಗುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿಯು ಇದೆ. ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಉನ್ನತ ಶ್ರೇಣಿಯ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ವಿಠ್ಠಲ ದೇವರ ದೇವಋಷಿ ಮುರೇಪ್ಪ ಪೂಜೇರಿ ವಹಿಸಿದ್ದರು.ಅಧ್ಯಕ್ಷತೆಯನ್ನು ಸ್ಥಳಿಯ ಆಡಳಿತ ಮಂಡಳಿ ಅಧ್ಯಕ್ಷ ಜ್ಯೋತ್ತೆಪ್ಪ ಬಂತಿ ವಹಿಸಿದ್ದರು.
ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ, ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ಸುಧೀರ ಜೋಡಟ್ಟಿ, ಶಂಕರ ಬಿಲಕುಂದಿ, ಮಹ್ಮದಇಸಾಕ ಅನಸಾರಿ, ಮಂಜುನಾಥ ಗುಡಕೇತ್ರ, ಸತ್ತೇಪ್ಪ ಹೊನ್ನಪ್ಪಗೋಳ, ಬಿ.ಬಿ.ಯಲ್ಲಟ್ಟಿ, ವಿಠ್ಠಲ ಕಾಶಪ್ಪಗೋಳ, ಮಾರುತಿ ಜಾಧವ, ಮಾರುತಿ ಶಿರಗುರಿ, ಭೀಮಪ್ಪ ಕಳಸನ್ನವರ, ಅಮೃತ ಕಾಳ್ಯಾಗೋಳ, ಬಡಪ್ಪ ಬಂಡಿವಡ್ಡರ, ರಾಮಪ್ಪ ಜೊತ್ತೆನ್ನವರ, ಮಾನಿಂಗ ತೆಳಗೇರಿ, ಬಸು ಗೋಕಾಕ, ಬಾಬು ಫಣಿಬಂದ, ಬಸವರಾಜ ಪೂಜೇರಿ, ಮಲ್ಲಪ್ಪ ಬೊಳನೆತ್ತಿ, ಸಿದ್ದಪ್ಪ ಸತ್ತಿಗೇರಿ, ಪವಾಡೆಪ್ಪ ಲಗಳೇರ, ಭಾರತಿ ರಾವನ್ನವರ, ಲಕ್ಕವ್ವ ಬೆಳಗಲಿ, ಜೈಬುನ್ನಿಸಾ ಬಡೇಖಾನ ಎಸ್.ಎಂ.ಯಮಕನಮರಡಿ, ಪಿ.ಎ.ಸರ್ಕಾವಸ್, ಎಸ್.ಎಂ.ಪಾಟೀಲ, ಮೋಗಾನಿ ಸೇರಿದಂತೆ ಇತರರು ಇದ್ದರು.
ಹುಕ್ಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಲ್.ಬಿ.ಪಟಾಯಿತ ಉಪನ್ಯಾಸ ನೀಡಿದರು. ಇದೇ ಶಾಲೆಗೆ ದೇಣಿಗೆ ದಾನಿಗಳನ್ನು ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯ ಎಂ.ಆರ್.ಕಡಕೋಳ ವರದಿವಾಚನ ಗೈದರು. ಎಂ.ಡಿ.ಪರವ್ವಗೋಳ ಸ್ವಾಗತಿಸಿದರು. ಎಸ್.ಎಸ್.ದೊಡಮನಿ ನಿರೂಪಿಸಿದರು. ಎಸ್.ಆರ್.ತರಾಳ ವಂದಿಸಿದರು.

Related posts: