ಮೂಡಲಗಿ:ಕವಿಯಾದವನು ಶೋಷಣೆಗಳನ್ನು ತನ್ನ ಸಾಹಿತ್ಯದ ಮುಖಾಂತರ ಹೊರಹಾಕಬೇಕು : ಶಿವಾನಂದ ಬೆಳಕೂಡ
ಕವಿಯಾದವನು ಶೋಷಣೆಗಳನ್ನು ತನ್ನ ಸಾಹಿತ್ಯದ ಮುಖಾಂತರ ಹೊರಹಾಕಬೇಕು : ಶಿವಾನಂದ ಬೆಳಕೂಡ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಫೆ 11 –
ಪ್ರಚಲಿತ ವರ್ತಮಾನಗಳನ್ನು, ಸಾಮಾಜಿಕ ಶೋಷಣೆಗಳನ್ನು ಕವಿಯಾದವನು ತನ್ನ ಸಾಹಿತ್ಯದ ಮುಖಾಂತರ ನಿರ್ಭಯವಾಗಿ ಹೊರಹಾಕಬೇಕು ಎಂದು ಹಿರಿಯ ಬಂಡಾಯ ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು
ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ರವಿವಾರದಂದು ಏರ್ಪಡಿಸಿದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸಾಹಿತ್ಯ ಎಂಬುದು ಕೇವಲ ವೈಭವೀಕರಣವಾಗದೆ ಸಮಾಜದಲ್ಲಿ ತುಳಿತಕ್ಕೊಳಗಾದವರ ಒಡಲಾಳದ ದ್ವನಿಯಾಗಬೇಕು ಎಂದರು.
ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ, ಸತ್ವಪೂರಿತ ಸಾಹಿತ್ಯ ಮೂಡಿಬರಬೇಕಾದರೆ ಸಾಹಿತ್ಯಾಧ್ಯಯನ ಅನಿವಾರ್ಯ. ಯುವ ಸಾಹಿತಿಗಳು ಅಧ್ಯಯನಶೀಲರಾಬೇಕಲ್ಲದೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಪಡೆಯಬೇಕು. ಇಂತಹ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಸ್ವವಿಮರ್ಶೆಗೊಳಗಾದಾಗ ಮಾತ್ರ ಗಟ್ಟಿ ಸಾಹಿತ್ಯ ರಚನೆ ಸಾಧ್ಯ ಎಂದು ಹೇಳಿದರು .
ಕ.ಸಾ.ಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಮಲ್ಲಪ್ಪ ಹಂಚನಾಳ, ಸುಭಾಸ ಕಡಾಡಿ, ಬಿ.ಎಮ್ ಪರುಶೆಟಿ,್ಟ ಮುರಗೇಶ ಗಾಡವಿ, ಬಸಪ್ಪ ಇಟ್ಟನ್ನವರ, ಮಹಾರಾಜ ಸಿದ್ದು, ಪ್ರಕಾಶ ಮೇತ್ರ್ರಿ, ಸದಾಶಿವ ಯಕ್ಷಂಬಿ ಹಾಗೂ 9 ಜನ ವಿಧ್ಯಾರ್ಥಿಕವಿಗಳನ್ನೊಳಗೊಂಡು ಜಿಲ್ಲೆಯಾದ್ಯಂತ 32 ಜನ ಕವಿಗಳು ಭಾಗವಹಿಸಿದ್ದರು. ಚಿದಾನಂದ ಹೂಗಾರ ವಂದಿಸಿದರು. ಶ್ರೀಮತಿ ಸಾವಿತ್ರಿ ಕಮಲಾಪೂರೆ ನಿರೂಪಿಸಿದರು.