RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ

ಗೋಕಾಕ:ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ 

ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 20 :

 

 

ಸರ್ವಜ್ಞ ಜಗತ್ತಿನ ಮಹಾನ ದಾರ್ಶನಿಕ ಜಗತ್ತಿನ ಎಲ್ಲ ಸಮಾಜ ಸುಧಾರಣೆಗೆ ತ್ರಿಪದಿಗಳ ಮೂಲಕ ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಕುಂಬಾರ ಗಲ್ಲಿಯ ಭಗತಸಿಂಗ್ ವೃತ್ತದಲ್ಲಿ ತಾಲೂಕಾಡಳಿತ, ನಗರ ಸಭೆ ಹಾಗೂ ಕುಂಬಾರ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಹಾನ ದಾರ್ಶನಿಕ ಕವಿ ಸರ್ವಜ್ಞ ಅವರು ಜಯಂತಿ ಉತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಸರ್ವಜ್ಞ ಕವಿ ದಾರ್ಶನಿಕನಾಗಿ, ಮಹಾನ ಸಂತನಾಗಿ, ಎಲ್ಲರಿಂದ ಎಲ್ಲವನ್ನು ಕಲಿತು, ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ. ಮಹಾಭಾರತ ಕಾಲದ ಶ್ರೀಕೃಷ್ಣ ಮಾತುಗಳಂತೆ ಸರ್ವಜ್ಞನ ತ್ರಿಪದಿಗಳು ಸರ್ವರಿಗೂ ಮಾರ್ಗದರ್ಶಿಗಳಾಗಿವೆ. ಅವರನ್ನು ತಮ್ಮ ನಿಜ ಜೀವನದಲ್ಲಿ ಆಚರಣೆಗೆ ತರುವ ಮೂಲಕ ಹೊಸ ಸಮಾಜವನ್ನು ಕಟ್ಟುವ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎಮ್.ಎಚ್.ಅತ್ತಾರ, ಉಪತಹಶೀಲದಾರ ಎಮ್.ಎ.ಚೌಧರಿ, ಕಾರ್ಮಿಕ ನಿರೀಕ್ಷಕ ಪಿ.ವಿ.ಮಾವರಕರ, ಮುಖಂಡರಾದ ಮಡಿವಾಳಪ್ಪ ಕುಂಬಾರ, ಅಶೋಲ ಹೆಗ್ಗಣ್ಣವರ ಮಹಾಂತೇಶ ಕುಂಬಾರ, ಅಶೋಕ ಬಂಡಿ, ಮುತ್ತೆಪ್ಪ ಕುಂಬಾರ, ಶಿವು ಗಡಾದವರ, ಶ್ರೀಶೈಲ ಕುಂಬಾರ, ಮಾರುತಿ ಗೌಡರ, ದುಂಡಪ್ಪ ಕುಂಬಾರ, ಸಂತೋಷ ಖಂಡ್ರಿ, ಗೋಪಿನಾಥ ಕುಂಬಾರ, ಮಹಿಳೆಯರು ಸೇರಿದಂತೆ ಅನೇಕರು ಇದ್ದರು.

Related posts: