RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ವೀರ ಯೋಧರ ಮೇಲೆ ಆದ ಉಗ್ರರ ದಾಳಿ ಖಂಡನೀಯವಾಗಿದೆ : ಕರವೇ ಅಧ್ಯಕ್ಷ ಖಾನಪ್ಪನವರ

ಗೋಕಾಕ:ವೀರ ಯೋಧರ ಮೇಲೆ ಆದ ಉಗ್ರರ ದಾಳಿ ಖಂಡನೀಯವಾಗಿದೆ : ಕರವೇ ಅಧ್ಯಕ್ಷ ಖಾನಪ್ಪನವರ 

ವೀರ ಯೋಧರ ಮೇಲೆ ಆದ ಉಗ್ರರ ದಾಳಿ ಖಂಡನೀಯವಾಗಿದೆ : ಕರವೇ ಅಧ್ಯಕ್ಷ ಖಾನಪ್ಪನವರ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ.ಫೆ 20 :
ಕಳೆದ ಕೆಲ ದಿನಗಳ ಹಿಂದೆ ಕಾಶ್ಮೀರನ ಪುಲ್ವಾಮಾ ಜಿಲ್ಲೆಯಲ್ಲಿ ವೀರ ಯೋಧರ ಮೇಲೆ ಆದ ಉಗ್ರರ ದಾಳಿ ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಬುಧವಾರದಂದು ನಗರದ ಕರವೇ ಕಾರ್ಯಾಲಯದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಹಮ್ಮಿಕೊಂಡಿದ್ದ “ಶ್ರದ್ಧಾಂಜಲಿ ಸಭೆ”ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಳೆದ ಫೆಬ್ರುವರಿ 14 ರಂದು ಕಾಶ್ಮೀರಿನ ಪುಲ್ವಾಮಾ ಪ್ರದೇಶದಲ್ಲಿ ಭಯೋತ್ಪಾದಕರು ಭಾರತೀಯ ಸಿ.ಆರ್.ಪಿ.ಎಫ್. ಯೋಧರ ಮೇಲೆ ನಡೆಸಿದ ದಾಳಿಯು ಅತ್ಯಂತ ನೀಚ ಮತ್ತು ಖಂಡನೀಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಭಾರತದ ಗಡಿ ಪ್ರದೇಶಗಳಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರು ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಇವರ ಅಟ್ಟಹಾಸಕ್ಕೆ ಸಾವಿರಾರು ವೀರ ಯೋಧರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೊನ್ನೆಯಷ್ಟೇ ನಡೆದ ಪುಲ್ವಾಮಾ ಪ್ರಕರಣವೂ ಹೊರತಾಗಿಲ್ಲ ಎಂದು ಖಾನಪ್ಪನವರ ಭಾರತ ಗಡಿ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಿ ಭಯೋತ್ಪಾದಕರು ನುಗ್ಗದಂತೆ ಕಠಿಣ ಕ್ರಮ ಕೈಗೊಂಡು ಭಾರತ ದೇಶವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಬೇಕೆಂದು ಖಾನಪ್ಪನವರ ಆಗ್ರಹಿಸಿ ದಾಳಿಯಲ್ಲಿ ಮಡಿದ ವೀರ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲೆಂದು ಪ್ರಾರ್ಥಿಸಿದರು. ಸಭೆಯ ಮೊದಲು ವೀರ ಮರಣ ಹೊಂದಿದ ವೀರ ಯೋಧರಿಗೆ ಗೌರವಾರ್ಥ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾದಿಕ್ ಹಲ್ಯಾಳ, ಮಂಜುನಾಥ ಪ್ರಭುನಟ್ಟಿ, ಅಕ್ಷಯ ಪಾಟೀಲ್, ಮುಗುಟ ಪೈಲವಾನ್, ಹಣುಮಂತ ಅಮ್ಮಣಗಿ, ಲಕ್ಕು ಮಾಳಗಿ, ಯಲ್ಲಪ್ಪಾ ಧರ್ಮಟ್ಟಿ, ದೀಪಕ ಆಶಿ, ಶಾನುಲ್ ನಾಯಿಕ, ಸಂತು ಕೋಲಕಾರ, ಮಹೇಶ ಪಾಟೀಲ, ಅಪ್ಪು ಅಂಬಲಿ, ಪರಶುರಾಮ, ವೀರುಪಾಕ್ಷ ಮಠಪತಿ, ಗೋವಿಂದ ಗಸ್ತಿ, ಬಾಳು ಮಾಸ್ತಮರ್ಡಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.

Related posts: