RNI NO. KARKAN/2006/27779|Thursday, November 7, 2024
You are here: Home » breaking news » ಖಾನಾಪುರ:ಖಾನಾಪುರದ ಲಕ್ಷ್ಮೀ ದೇವತೆ ಜಾತ್ರೆಗೆ ಅದ್ದೂರಿ ಚಾಲನೆ

ಖಾನಾಪುರ:ಖಾನಾಪುರದ ಲಕ್ಷ್ಮೀ ದೇವತೆ ಜಾತ್ರೆಗೆ ಅದ್ದೂರಿ ಚಾಲನೆ 

ಖಾನಾಪುರದ ಲಕ್ಷ್ಮೀ ದೇವತೆ ಜಾತ್ರೆಗೆ ಅದ್ದೂರಿ ಚಾಲನೆ

 
ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಪೆ 21 :

 

ಪ್ರತಿ 12 ವರ್ಷಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರದ ಗ್ರಾಮ ದೇವತೆ ಲಕ್ಷ್ಮೀ ದೇವಿ ಜಾತ್ರೆಗೆ ಪೂಜೆ ಸಲ್ಲಿಸುವ ಮೂಲಕ ಶಾಸಕಿ ಅಂಜಲಿತಾಯಿ ನಿಂಬಾಳ್ಕರ ಚಾಲನೆ ನೀಡಿದರು .

ಹೆಲಿಕಾಪ್ಟರ್ ಮೂಲಕ ಲಕ್ಷ್ಮೀ ದೇವಿಗೆ ಪುಷ್ಪವೃಷ್ಠಿ ಮಾಡಲಾಯಿತು. ದಿನವಿಡೀ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಹೊನ್ನಾಟವಾಡಲು ಅಂದಾಜು 500 ಚೀಲದಷ್ಟು ಭಂಡಾರದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಈ ಆಟದಲ್ಲಿ ನಿಂಬಾಳ್ಕರ್ ದಂಪತಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.
9 ದಿನ ನಡೆಯುವ ಜಾತ್ರೆಗೆ ಬೇಕಾದ ಮೂಲ ಸೌಕರ್ಯಕ್ಕೆ ರಾಜ್ಯ ಸರ್ಕಾರ ಅಂದಾಜು 9 ಕೋಟಿ ಬಿಡುಗಡೆ ಮಾಡಿದೆ. ಸುರಕ್ಷತೆಯ ದೃಷ್ಟಿಯಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 27 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭಕ್ತಾದಿಗಳ ಸೌಲಭ್ಯಕ್ಕಾಗಿ 40 ಕುಡಿಯುವ ನೀರಿನ ಟ್ಯಾಂಕ್​​ಗಳು, ಮೊಬೈಲ್ ಶೌಚಾಲಯ, ಅಗ್ನಿಶಾಮಕ ವಾಹನಗಳು, 4 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Related posts: