RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಅರಣ್ಯಾಧಿಕಾರಿಯಿಂದ ವಿಶೇಷ ಗೌರವ : ಹುತಾತ್ಮ ವೀರ ಯೋಧರಿಗೆ ಗೀತ ನಮನ

ಬೆಳಗಾವಿ:ಅರಣ್ಯಾಧಿಕಾರಿಯಿಂದ ವಿಶೇಷ ಗೌರವ : ಹುತಾತ್ಮ ವೀರ ಯೋಧರಿಗೆ ಗೀತ ನಮನ 

ಅರಣ್ಯಾಧಿಕಾರಿಯಿಂದ ವಿಶೇಷ ಗೌರವ : ಹುತಾತ್ಮ ವೀರ ಯೋಧರಿಗೆ ಗೀತ ನಮನ

 

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಪೆ 22 :

 

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ 44 ವೀರ ಯೋಧರಿಗೆ ಗೀತ ನಮನ ಮೂಲಕ ಬೆಳಗಾವಿ ಜಿಲ್ಲೆಯ ದಡ್ಡಿಯ ವಲಯದ ಉಪ ಅರಣ್ಯಾಧಿಕಾರಿ ಗಜಾನಂದ ಪಾಟೀಲ ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ .
ಸ್ವತಃ ತಾವೇ ಗೀತ ರಚನೆ ಮಾಡಿ ಹಾಡಿದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಡಾ. ವಿಷ್ಣುವರ್ಧನ್​ ಅಭಿನಯದ ಈ ಭೂಮಿ ಬಣ್ಣದ ಬುಗುರಿ ಹಾಡಿನ  ಇನ್​ಸ್ಟ್ರುಮೆಂಟಲ್ ಸಂಗೀತ ಬಳಸಿ ಹಾಡಿದ್ದಾರೆ. “ಈ ದೇಶಕ್ಕಾಗಿ ಮಡಿದ ದೇಶ ಭಕ್ತರಿಗೆ ನಮನ ಇದು, ಈ ಭರತ ಭೂಮಿ ಇಂದು ಮುಂದು ಭಾರತೀಯರು ಒಂದು” ಎಂದು ಸ್ವಗೀತ ರಚನೆ ಮಾಡಿ ಧ್ವನಿಗೂಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೇಶಕ್ಕಾಗಿ 44 ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ದೇಶದಾದ್ಯಂತ ಜನರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ನಾನು ಕೂಡ ಗೀತ ರಚಿಸಿ, ಹಾಡುವ ಮೂಲಕ ಹುತಾತ್ಮ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ್ದೇನೆ ಎಂದರು.

Related posts: