ಗೋಕಾಕ:ಕಿಸಾನ ಸಮ್ಮಾನ್ ನಿಧಿಯ ಹಣವನ್ನು ಕೃಷಿ ಸಂಭಂದಿತ ಚಟುವಟಿಕೆಗಳಿಗೆ ಉಪಯೋಗಿಸಿ : ಡಿ. ಸಿ. ಚೌಗಲಾ
ಕಿಸಾನ ಸಮ್ಮಾನ್ ನಿಧಿಯ ಹಣವನ್ನು ಕೃಷಿ ಸಂಭಂದಿತ ಚಟುವಟಿಕೆಗಳಿಗೆ ಉಪಯೋಗಿಸಿ : ಡಿ. ಸಿ. ಚೌಗಲಾ
ನಮ್ಮ ಬೆಳಗಾವಿ ಸುದೀಪ್ , ಬೆಟಗೇರಿ ಪೆ 25 :
ಕೆವಿಕೆ ಹಾಗೂ ಆತ್ಮಾ ಯೋಜನೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭದ ನೇರ ಪ್ರಸಾರದ ಕಾರ್ಯಕ್ರಮ ಸಮೀಪದ ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ 24.ರಂದು ನಡೆಯಿತು.
ಕೇಂದ್ರದ ವಿಜ್ಞಾನಿ ಆದರ್ಶ ಎಚ್.ಎಸ್ ಅವರು ಕಿಸಾನ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ವಿವರಿಸಿದರು. ಕೆ.ವಿ.ಕೆ ಮುಖ್ಯಸ್ಥ ಡಿ. ಸಿ. ಚೌಗಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿಸಾನ ಸಮ್ಮಾನ್ ನಿಧಿಯ ಮೂಲಕ ದೊರೆಯುವ ಹಣವನ್ನು ರೈತರು ಕೃಷಿ ಪರಿಕರಗಳನ್ನು ಕೊಳ್ಳಲು ಹಾಗೂ ಇತರೆ ಕೃಷಿ ಸಂಭಂದಿತ ಚಟುವಟಿಕೆಗಳಿಗೆ ಉಪಯೋಗಿಸಲು ಸೂಚಿಸಿದರು.
ಬೆಳಗಾವಿ ಆತ್ಮಾ ಯೋಜನೆ ಉಪ ಯೋಜನಾ ನಿರ್ದೇಶಕ ಎಮ್. ಸಿ ಮಠದ ಮುಖ್ಯ ಅತಿಥಿಗಳಾಗಿ ಮಾತನಾಡಿ, ರೈತರು ಸ್ವಇಚ್ಚೆಯಿಂದ ಸಣ್ಣ ಉಳಿತಾಯ ಖಾತೆಗಳಲ್ಲಿ ಹಣವನ್ನು ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು ಹಾಗೂ ಕಿಸಾನ ಸಮ್ಮಾನ್ ನಿಧಿಯ ಲಾಭವನ್ನು ಪಡೆದು ನೆಮ್ಮದಿಯಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ತುಕ್ಕಾನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ನಾವಿ, ಗೋಕಾಕ ತಾಲೂಕಿನ ಕೃಷಿಕ ಸಮಾಜದ ಅಧಕ್ಷ ಅಶೋಕ ಗದಾಡಿ, ಕೆಂಪಣ್ಣ ಬಿಸಿರೊಟ್ಟಿ, ಜಿಲ್ಲೆಯ ರೈತರು ಹಾಗೂ ಗೋಕಾಕ ತಾಲೂಕಿನ ಆತ್ಮಾ ಸಿಬ್ಬಂದಿ, ಮತ್ತೀತರರು ಉಪಸ್ಥಿತರಿದ್ದರು.
ಕೆವಿಕೆಯ ವಿಜ್ಞಾನಿ ಎಸ್.ಎಸ್.ಶರ್ಮಾ ಸ್ವಾಗತಿಸಿದರು. ಎನ್.ಆರ್.ಸಾಲಿಮಠ ವಂದಿಸಿದರು.