RNI NO. KARKAN/2006/27779|Friday, March 14, 2025
You are here: Home » breaking news » ಗೋಕಾಕ:ಶಾಲೆಯ ಸಮಗ್ರ ಪ್ರಗತಿ ಸಾಧಿಸಬೇಕಾದರೆ ಶಾಲೆಯ ಪಾಲಕರ ಸಹಾಯ, ಸಹಕಾರ ಮಹತ್ವದಾಗಿದೆ : ಬಿ.ಟಿ.ಪುಂಜಿ

ಗೋಕಾಕ:ಶಾಲೆಯ ಸಮಗ್ರ ಪ್ರಗತಿ ಸಾಧಿಸಬೇಕಾದರೆ ಶಾಲೆಯ ಪಾಲಕರ ಸಹಾಯ, ಸಹಕಾರ ಮಹತ್ವದಾಗಿದೆ : ಬಿ.ಟಿ.ಪುಂಜಿ 

ಶಾಲೆಯ ಸಮಗ್ರ ಪ್ರಗತಿ ಸಾಧಿಸಬೇಕಾದರೆ ಶಾಲೆಯ ಪಾಲಕರ ಸಹಾಯ, ಸಹಕಾರ ಮಹತ್ವದಾಗಿದೆ : ಬಿ.ಟಿ.ಪುಂಜಿ

 

ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಪೆ 25 :

 

ಗ್ರಾಮೀಣ ವಲಯದಲ್ಲಿರುವ ಒಂದು ಶಾಲೆಯ ಸಮಗ್ರ ಪ್ರಗತಿ ಸಾಧಿಸಬೇಕಾದರೆ ಶಾಲೆಯ ಪಾಲಕರ ಸಹಾಯ, ಸಹಕಾರ ಮಹತ್ವದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಲಯದ ಸಿಆರ್‍ಸಿ ಬಿ.ಟಿ.ಪುಂಜಿ ಹೇಳಿದರು.
ಗ್ರಾಮದ ಚೈತನ್ಯ ಗುಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಫೆ.24 ರಂದು ನಡೆದ ಪ್ರಸಕ್ತ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮೇಳನ ಹಾಗೂ ಬೀಳ್ಕೂಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಾಲೆಯ ಸಲಹಾ ಸಮಿತಿ ಸದಸ್ಯ ಬಸಪ್ಪ ಮೆಳೆಣ್ಣವರ ಸಮಾರಂಭ ಉದ್ಘಾಟಿಸಿದರು. ತಾಪಂ ಮಾಜಿ ಸದಸ್ಯ ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಕ್ರೀಡಾಕೂಟ ಸೇರಿದಂತೆ ವಿವಿಧ ವಲಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಭಾಷಣ, ಸಮೂಹ ನೃತ್ಯ ಸೇರಿದಂತೆ ಹಲವಾರು ಸಾಂಸ್ಕøತೀಕ ಕಾರ್ಯಕ್ರಮಗಳು ಮನರಂಜಿಸಿದವು. ಅಂತರಾಷ್ಟ್ರೀಯ ಮಟ್ಟದ ಮಲ್ಲಕಂಬ ವಿಶ್ವಕಪ್ ವಿಜೇತ ತಂಡದ ಮೂಡಲಗಿಯ ಮಲ್ಲಕಂಬ ಮಾರ್ಗದರ್ಶಕ, ದೈಹಿಕ ಶಿಕ್ಷಕ ಮಹೆಬೂಬ ಬಂಡಿವಾಡ ಅವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಶಿಕ್ಷಣಪ್ರೇಮಿ ಸತ್ತೆವ್ವ ದೇಯಣ್ಣವರ, ಆರ್.ಬಿ.ಬೆಟಗೇರಿ, ಎಸ್.ವೈ.ಪಾಟೀಲ, ಶಾಲೆಯ ಆಡಳಿತಾಧಿಕಾರಿ ಚಂದ್ರು ಹಾಲೊಳ್ಳಿ, ಮೆಳೆಪ್ಪ ಮೆಳೆಣ್ಣವರ, ರಮೇಶ ನಾಯ್ಕ, ಚೈತನ್ಯ ಗ್ರುಪ್ಸ್‍ನ ಉಭಯ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ದೇವಕಿ ಗೌಡ, ಸಂಜೀವ ಮೆಳವಂಕಿ, ವಿಠಲ ಹೊರಟ್ಟಿ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಶಿಕ್ಷಣಪ್ರೇಮಿಗಳು, ಶಾಲೆಯ ಸಲಹಾ ಸಮಿತಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಇತರರು ಇದ್ದರು.

 

Related posts: