RNI NO. KARKAN/2006/27779|Thursday, December 12, 2024
You are here: Home » breaking news » ಖಾನಾಪುರ:ಹಲಸಿಯಲ್ಲಿ ಕದಂಬೋತ್ಸವ ಆಚರಿಸವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಕರವೇ ಆಗ್ರಹ

ಖಾನಾಪುರ:ಹಲಸಿಯಲ್ಲಿ ಕದಂಬೋತ್ಸವ ಆಚರಿಸವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಕರವೇ ಆಗ್ರಹ 

ಹಲಸಿಯಲ್ಲಿ ಕದಂಬೋತ್ಸವ ಆಚರಿಸವಂತೆ  ಮಾಜಿ ಸಿಎಂ ಸಿದ್ದರಾಮಯ್ಯಗೆ ಕರವೇ ಆಗ್ರಹ

ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಪೆ 26 :

ತಾಲೂಕಿನ ಹಲಸಿ ಗ್ರಾಮದಲ್ಲಿ ರಾಜ್ಯ ಸರ್ಕಾರ 2014 ಮತ್ತು 2015 ರಲ್ಲಿ ಕದಂಬೋತ್ಸವ ಆಚರಿಸಿದ್ದು, ಬಳಿಕ ಮರೆತಿದೆ.ಹೀಗಾಗಿ ಹಲಸಿಯಲ್ಲಿ ಕದಂಬೋತ್ಸವವನ್ನು ಪುನಃ ಆಚರಿಸುವಂತೆ ರಾಜ್ಯ ಸರ್ಕಾರ ದ ಮೇಲೆ ಒತ್ತಡ ತರಬೇಕೆಂದು ತಾಲೂಕಿನ ಕರವೇ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯದ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಇದರ ಮೊದಲು ಹಲಸಿ ಗ್ರಾಮಪಂಚಾಯಿತಿ ಅಧ್ಯಕ್ಷ ಆರ್.ಡಿ.ಹಂಜಿ ಅವರು ಕೂಡಾ  ಹಲಸಿಯಲ್ಲಿ ಕದಂಬೋತ್ಸವ ಆಚರಿಸುವ ಕುರಿತು ಮನವಿ ಮಾಡಿದರು. 

 

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷರಾದ ಆರೋಗ್ಯಪ್ಪ ಪಾದನಕಟ್ಟಿ, ಉಪಾಧ್ಯಕ್ಷ ವಿಠ್ಠಲ ಹಿಂಡಲಕರ, ಕಾರ್ಯದರ್ಶಿ ದಶರಥ ಬನೋಶಿ ಮತ್ತು ನಂದಗಡ ಕರವೇ (ಪ್ರವೀಣ ಶೆಟ್ಟಿ) ಘಟಕದ ಅಧ್ಯಕ್ಷ ಇಬ್ರಾಹಿಂ ತಾಹಶೀಲ್ದಾರ, ಮಲ್ಲಿಕಾರ್ಜುನ ಹೊಸೂರ ಈ ಮನವಿ ಸಲ್ಲಿಸಿದರು.

ಹಲಸಿಯಲ್ಲಿ ಎರಡು ಬಾರಿ ಮಾತ್ರ   ಕದಂಬೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗಿದೆ ನಂತರದ ವರ್ಷಗಳಲ್ಲಿ ಉತ್ಸವ ಆಚರಣೆಗೆ ಅನುದಾನ ಮಂಜೂರಾಗಲು ತಡವಾದ ಕಾರಣ ಉತ್ಸವವನ್ನು ಮುಂದೂಡುತ್ತ ಬರಲಾಗಿದೆ. ಈ ವರ್ಷವಾದರೂ ಕನ್ನಡಿಗರ ಹೆಮ್ಮೆಯ ಉತ್ಸವ ಆಚರಿಸಲು ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಕೂಡಲೇ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆಸಿ ಉತ್ಸವ ಆಚರಣೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

Related posts: