ಘಟಪ್ರಭಾ:ವಿದ್ಯಾರ್ಥಿಗಳು ಅಸಾಧ್ಯವೆಂಬ ಪದವನ್ನು ಕಿತ್ತು ಹಾಕಿ ಛಲದಿಂದ ಮುನ್ನಡೆಯಬೇಕು : ಜಿ.ಎಲ್ ಕೋಳಿ ಅಭಿಮತ
ವಿದ್ಯಾರ್ಥಿಗಳು ಅಸಾಧ್ಯವೆಂಬ ಪದವನ್ನು ಕಿತ್ತು ಹಾಕಿ ಛಲದಿಂದ ಮುನ್ನಡೆಯಬೇಕು : ಜಿ.ಎಲ್ ಕೋಳಿ ಅಭಿಮತ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಪೆ 26 :
ವಿದ್ಯಾರ್ಥಿಗಳು ಅಸಾಧ್ಯವೆಂಬ ಪದವನ್ನು ಕಿತ್ತು ಹಾಕಿ ಛಲದಿಂದ ಮುನ್ನಡೆಯಬೇಕು ಎಂದು ಹುಣಶ್ಯಾಳ ಪಿಜಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗುರುನಾಥ ಎಲ್. ಕೋಳಿ ಹೇಳಿದರು.
ಅವರು ಮಂಗಳವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 10ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಸಮಾಜದಲಿ ಉತ್ತಮ ್ಲ ಪ್ರಜೆಗಳನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳು ತಾವು ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಕಲಿತ ಸಂಸ್ಥೆಯ ಹಾಗೂ ಶಾಲೆಗೆ ಕೀರ್ತಿ ತರಬೇಕು. ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಮೊಬೈಲದಿಂದ ದೂರುಳಿದು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕದಿಂದ ಜ್ಞಾನ ಸಂಪಾದನೆಯಾಗುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿಯು ಇದೆ. ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಉನ್ನತ ಶ್ರೇಣಿಯ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಳೆದ ಸಾಲಿನಲ್ಲಿ ಶಾಲೆಗೆ ಪ್ರಥಮ ಸ್ಥಾನ ಮತ್ತು ವಿವಿಧ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಲ್.ಬಿ. ರಡ್ಡಿ ವಹಿಸಿದ್ದರು.
ವೇದಿಕೆ ಮೇಲೆ ದುಂಡಯ್ಯ ಹಿರೇಮಠ, ಸದಾನಂದ ಗಾಯಕವಾಡ, ಪಿ.ಬಿ.ಕದಮ, ವಿಠ್ಠಲ ಕರೋಶಿ, ಶಶಿಕಾಂತ ದಪ್ತರದಾರ, ಅಸ್ಕರಲಿ ಸರಕಾವಸ್, ವಿಠ್ಠಲ ಕನಕಿಕೊಡಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಪರಿಶ್ರಮ ಹಿರಿಮೆಗೆ ಪುರಸ್ಕಾರ ಯೋಜನೆಯಡಿ ಪ್ರೋ: ಶಿ.ಶಿ.ಬಸವನಾಳ ಉತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ ಪುರಸ್ಕøತರಾದ ಹುಣಶ್ಯಾಳ ಪಿಜಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗುರುನಾಥ ಎಲ್. ಕೋಳಿ ಹಾಗೂ ಮಾಧ್ಯಮ ಪ್ರವೀಣ ಪ್ರಶಸ್ತಿ ಪುರಸ್ಕøತರಾದ ವಿಠ್ಠಲ ಕರೋಶಿ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಕೆ.ಎ.ಗಡ್ಡಿ ವರದಿವಾಚನ ಗೈದರು. ವಿ.ಎಂ.ಮುನ್ನೋಳಿ ಸ್ವಾಗತಿಸಿದರು. ರೇಖಾ. ಕೆ ನಿರೂಪಿಸಿದರು. ಎಫ್.ಜಿ.ಬಾಗವಾನ ವಂದಿಸಿದರು.