RNI NO. KARKAN/2006/27779|Wednesday, November 6, 2024
You are here: Home » breaking news » ಘಟಪ್ರಭಾ:ಜಾನಪದ ಕಲೆಗಳು ಹಳ್ಳಿಯ ಜನರ ಜೀವನಾಡಿ : ಈಶ್ವರಚಂದ್ರ ಬೆಟಗೇರಿ

ಘಟಪ್ರಭಾ:ಜಾನಪದ ಕಲೆಗಳು ಹಳ್ಳಿಯ ಜನರ ಜೀವನಾಡಿ : ಈಶ್ವರಚಂದ್ರ ಬೆಟಗೇರಿ 

ಜಾನಪದ ಕಲೆಗಳು ಹಳ್ಳಿಯ ಜನರ ಜೀವನಾಡಿ : ಈಶ್ವರಚಂದ್ರ ಬೆಟಗೇರಿ

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಪೆ 26 :

 

ಜಾನಪದ ಕಲೆಗಳು ಹಳ್ಳಿಯ ಜನರ ಜೀವನಾಡಿ, ಜನರ ಸಂಪ್ರದಾಯ ಆಚಾರ ವಿಚಾರ ಹಾಗೂ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹಿರಿಯ ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿ ಹೇಳಿದರು.
ಅವರು ಇತ್ತೀಚಿಗೆ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಶ್ರೀ ಸಿದ್ಧಾರೂಢÀ ಮಠದ ನಾಲ್ಕನೆ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಗುರು ಪುಟ್ಟರಾಜ ರಂಗಭೂಮಿ ಸಾಂಸ್ಕøತಿಕ ಕಲಾ ಸಂಸ್ಥೆ(ರಿ) ಘಟಪ್ರಭಾ ಹಾಗೂ ಕನ್ನಡ ಮತ್ತು ಸಾಂಸ್ಕøತಿಕ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ “ಸಾಂಸ್ಕøತಿಕ ಕಲಾ ಉತ್ಸವ-2019” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ಜಾನಪದ ಮತ್ತು ರಂಗಭೂಮಿ ಕಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.
ಹಾಸ್ಯ ಕಲಾವಿದ ಜಯಾನಂದ ಮಾದರ ಮಾತನಾಡಿ ಕಲಾವಿದರ ಬದುಕು ಹಸನಾಗಬೇಕು. ಅವರ ಜೀವನೋಪಾಯಕ್ಕೆ ಭದ್ರತೆ ಬೇಕು ಅಂದಾಗ ಎಲ್ಲ ಕಲೆಗಳು ಉಳಿಯಲು ಸಾಧ್ಯ ಅದಕ್ಕೆ ನಾವೆಲ್ಲರೂ ಸ್ಪಂದಿಸಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ಅಪ್ಪಾಸಾಹೇಬ ನದಾಫ ವಹಿಸಿದ್ದರು. ವೇದಿಕೆ ಮೇಲೆ ಕಲಾವಿದರಾದ ರಿಯಾಜ ಚೌಗಲಾ, ಭರತ ಕಲಾಚಂದ್ರ, ಹಿರಿಯರಾದ ಲಕ್ಷ್ಮಣಗೌಡ ಪಾಟೀಲ, ನಾಗಪ್ಪಾ ಗೋಟೂರ, ಹಣಮಂತ ನಾಯಿಕ, ಪತ್ರಕರ್ತ ಲಕ್ಷ್ಮಣ ನಂದಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಳಕಟನಾಳದ ವಿಠ್ಠಲ ಹುಲ್ಲಾರ (ಶಿಕ್ಷಣ), ಮೂಡಲಗಿಯ ಅಯೂಬ ಕಲಾರಕೊಪ್ಪ (ಜಾನಪದ), ಗೋಕಾಕದ ಡಾ.ರಮೇಶ ಪಟಗುಂದಿ (ವೈದಕೀಯ), ಗೋಕಾಕ ಫಾಲ್ಸದ ಆಝಾದ ಸನದಿ (ವಾದ್ಯ ಸಂಗೀತ), ಜಮಖಂಡಿಯ ಶಿಲ್ಪಾ ಶಿಂದೆ (ರಂಗ ಭೂಮಿ), ಶಿಂದಿಕುರಬೇಟದ ವಿಠ್ಠಲ ಕರೋಶಿ (ಪತ್ರಿಕಾ ಮಾಧ್ಯಮ) ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾ ತಂಡಗಳಿಂದ ಕಲಾ ಪ್ರದರ್ಶನ ಜರುಗಿತು. ಸಂಘದ ಅಧ್ಯಕ್ಷರಾದ ಲಗಮಣ್ಣಾ ದೊಡಮನಿ (ತಳಕಟನಾಳ) ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಬಾಳೇಶ ದೊಡಮನಿ ಸ್ವಾಗತಿಸಿದರು. ಶಿಕ್ಷಕಿ ಉಮಾ ದೊಡಮನಿ ನಿರೂಪಿಸಿ ವಂದಿಸಿದರು.

Related posts: