ಘಟಪ್ರಭಾ:ಯೋಧರ ಹತ್ಯೆಗೆ ಪ್ರತೀಕಾರ : ಘಟಪ್ರಭಾದಲ್ಲಿ ವಿಜಯೋತ್ಸವ
ಯೋಧರ ಹತ್ಯೆಗೆ ಪ್ರತೀಕಾರ : ಘಟಪ್ರಭಾದಲ್ಲಿ ವಿಜಯೋತ್ಸವ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಪೆ 28:
ಕಾಶ್ಮೀರದ ಪುಲ್ವಾಮಾದಲ್ಲಿ ಭಾರತ ದೇಶದ ಯೋಧರ ಹತ್ಯೆಗೆ ಪ್ರತೀಕಾರವಾಗಿ 25 ರಂದು ಪಾಕಿಸ್ತಾನದ ಗಡಿಯೋಳಗೆ ನುಗ್ಗಿ 350 ಜನ ಉಗ್ರರನ್ನು ಬಲಿತೆಗೆದುಕೊಂಡ ಭಾರತ ಸೇನೆಯ ಶೌರ್ಯದ್ಯೂತಕವಾಗಿ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಮಂಗಳವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.
ಬಿಜೆಪಿ ಹಿರಿಯ ಕಾರ್ಯಕರ್ತರಾದ ಸುರೇಶ ಪಾಟೀಲ ಮಾತನಾಡುತ್ತ, ನಾವು ಶಾಂತಿಪ್ರಿಯರು, ಆದರೆ ವಿನಾಕಾರಣ ನಮ್ಮ ಮೈಮೇಲೆ ಬಂದರೆ ಇಂತಹ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಭಾರತದ ದಿಟ್ಟ ಪ್ರಧಾನಿ ನರೇಂದ್ರ ಮೋದಿ ತೋರಿಸಿ ಕೊಟ್ಟಿದ್ದಾರೆ. ಇನ್ನಾದರೂ ಪಾಪಿ ಪಾಕಿಸ್ತಾನವು ಇಂತಹ ಕ್ರೂರ ಕೃತ್ಯಗೆ ಕೈ ಹಾಕಬಾರದು. ಅನೇಕ ಯುವಕರು ಮಾತನಾಡಿ ಪಾಕಿಸ್ತಾನವು ಇಷ್ಟಕ್ಕೆ ಬುದ್ದಿ ಕಲಿಯದಿದ್ದರೆ ನಮ್ಮ ದೇಶದ ಸೈನಿಕರು ದಿಟ್ಟ ಉತ್ತರ ನೀಡಲು ಸಿದ್ದರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯುವಕರು ಭಾರತದ ಸೈನಿಕರ ಸಾಹಸ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಜೈಕಾರ ಹಾಕುತ್ತ ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.