RNI NO. KARKAN/2006/27779|Saturday, October 19, 2024
You are here: Home » breaking news » ಖಾನಾಪುರ:ಭುವನೇಶ್ವರಿ ಸೇವೆಗೆ ನಾಡಿನ ಸಮಸ್ತ ಕನ್ನಡಾಭಿ ಮಾನಿಗಳು ಕಂಕಣ ಬದ್ಧರಾಗಿ : ಚನ್ನಬಸವದೇವರು

ಖಾನಾಪುರ:ಭುವನೇಶ್ವರಿ ಸೇವೆಗೆ ನಾಡಿನ ಸಮಸ್ತ ಕನ್ನಡಾಭಿ ಮಾನಿಗಳು ಕಂಕಣ ಬದ್ಧರಾಗಿ : ಚನ್ನಬಸವದೇವರು 

ಭುವನೇಶ್ವರಿ ಸೇವೆಗೆ ನಾಡಿನ ಸಮಸ್ತ ಕನ್ನಡಾಭಿ ಮಾನಿಗಳು ಕಂಕಣ ಬದ್ಧರಾಗಿ : ಚನ್ನಬಸವದೇವರು

 

ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಮಾ 6 :

 
ನಾಡು, ನುಡಿ, ನೆಲ, ಜಲ, ಭಾಷೆಯ ರಕ್ಷಣೆಗೊಸ್ಕರ ಕರ್ನಾಟಕ ರಕ್ಷಣಾ ವೇದಿಕೆ ಸೇನಾನಿಗಳು ಇರುವಾಗ ಭುವನೇಶ್ವರಿ ಸೇವೆಗೆ ನಾಡಿನ ಸಮಸ್ತ ಕನ್ನಡಾಭಿ ಮಾನಿಗಳು ಕಂಕಣ ಬದ್ಧರಿದ್ದಾರೆಂದು ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಪೂಜ್ಯರಾದ ಶ್ರೋ.ಬ್ರ.ಚನ್ನಬಸವದೇವರು ಹೇಳಿದರು.

ತಾಲೂಕಿನ ಹೊಸಲಿಂಗನಮಠ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಹಮ್ಮಿಕೊಂಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕಳೆದ ಸುಮಾರು ವರ್ಷಗಳ ಹಿಂದೆ ಖಾನಾಪುರ ತಾಲೂಕಿನಲ್ಲಿ ಎಮ್.ಇ.ಎಸ್ ಪ್ರಾಬಲ್ಯ ಹೆಚ್ಚಾಗಿತ್ತು. ಆಗ ತಾಲೂಕಿನ ಸರಕಾರಿ ಕಚೇರಿಗಳಿಗೆ ಹೋದಾಗ ಮರಾಠಿ ಭಾಷೆಯಲ್ಲೇ ಅಧಿಕಾರಿಗಳು ಮಾತನಾಡುತ್ತಿದ್ದರು ಆದರೆ ಇಂದು ಅದು ಸಂಪೂರ್ಣ ಬದಲಾಗಿದೆ ಎಲ್ಲರೂ ಕನ್ನಡವನ್ನು ಕಲಿತ್ತಿರುವುದು ಸಂತಸ ತಂದಿದೆ

ನೆಲ, ಜಲ, ಭಾಷೆ, ರೈತರ ಸಮಸ್ಯೆಗಳು ಎದುರಾದಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟ, ಪ್ರತಿಭಟನೆ ಮಾಡುವುದರ ಮೂಲಕ ಎಲ್ಲರಿಗೂ ಒಳಿತಾಗುವ ಹಾಗೇ ಕಾರ್ಯ ಮಾಡಿದ್ದಾರೆ. ಇವರ ಈ ಕಾರ್ಯ ಇತರರಿಗೆ ಮಾದರಿ ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಸ್ಥ ಕರವೇ ತಾಲೂಕಾ ಸಂಚಾಲಕ ಪಾಂಡುರಂಗ ಮಿಟಗಾರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರವೇ ತಾಲೂಕಾ ಅಧ್ಯಕ್ಷ ಆರೋಗ್ಯಪ್ಪ ಪಾದನಕಟ್ಟಿ , ದಶರಥ ಬನೋಶಿ, ಕಡಬಗಟ್ಟಿ ಗ್ರಾಪಂ ಅಧ್ಯಕ್ಷ ದಸಗೀರ ಹುಣಶಿಕಟ್ಟಿ , ಮಲಪ್ರಭಾ ಕಳಸಾ ನದಿಗಳ ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಸಂಗೋಳ್ಳಿ, ಮಾಜಿ ಎಪಿಎಂಸಿ ಸದಸ್ಯ ರಾಜು ರಪಾಟಿ, ಕರವೇ ಧಾರವಾಡ ಜಿಲ್ಲಾ ಸಂಚಾಲಕ ಪ್ರಭು , ಸಂತಾನ ಲೋಬೋ, ಕರವೇ ಅಧ್ಯಕ್ಷ ಅಬ್ದುಲ ಹಟ್ಟಿಹೊಳಿ, ಗ್ರಾಪಂ ಸದಸ್ಯರಾದ ಮುಸ್ತಫಾ ದಾಸ್ತಿಕೊಪ್ಪ, ಪಾರ್ವತಿ ಮಾಟೋಳ್ಳಿ, ಗ್ರಾಮದ ಹಿರಿಯರಾದ ದೆಮನ್ನಾ ಶಿವಪೂಜಿ, ಬಸವಂತ ಮಾಟೋಳ್ಳಿ, ಬಾಬುಲಾಲ ಪಟೇಲ, ರಾಚಯ್ಯಾ ಚರಂತಿಮಠ, ಶಾಮೀರ ಹಟ್ಟಿಹೊಳಿ, ರವಿ ಚಲವಾದಿ, ಸಂಜು ಪಾರಿಶ್ವಾಡ, ಕರವೇ ಹೊಸಲಿಂಗನಮಠ ಘಟಕದ ಪಧಾಧಿಕಾರಿಗಳು ಹಾಜರಿದ್ದರು.

ಕಾರ್ಯಕ್ರಮವನ್ನು ಪತ್ರಕರ್ತ ಕಾಶೀಮ ಹಟ್ಟಿಹೊಳಿ ನಿರೂಪಿಸಿದರು. ನದೀಮ ದಾದೂನವರ ಸ್ವಾಗತಿಸಿದರು. ಸಿದ್ದು ಕಾಜಗಾರ ವಂದಿಸಿದರು.

Related posts: