RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಸೇವಾ ಭಾವದ ಮಹಾಲಯ ಎನ್.ಎಸ್.ಎಸ್. : ಡಾ. ಜಿ ಕಲ್ಪನಾ

ಬೆಳಗಾವಿ:ಸೇವಾ ಭಾವದ ಮಹಾಲಯ ಎನ್.ಎಸ್.ಎಸ್. : ಡಾ. ಜಿ ಕಲ್ಪನಾ 

ಸೇವಾ ಭಾವದ ಮಹಾಲಯ ಎನ್.ಎಸ್.ಎಸ್. : ಡಾ. ಜಿ ಕಲ್ಪನಾ

 
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ :ಮಾ-13 :

 
ರಾಷ್ಟ್ರೀಯ ಸೇವಾ ಯೋಜನೆಯು ಸೇವಾ ಭಾವದ ಮಹಾಲಯವಿದ್ಧಂತೆ. ಪದವಿ ಓದುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಸಮಾಜ ಸೇವೆ ಮಾಡುವ ಮಹೋನ್ನತ ಉದ್ದೇಶಗಳನ್ನು ಎನ್.ಎಸ್.ಎಸ್. ಗೆ ಸೇರಿಕೊಳ್ಳುವ ಮೂಲಕ ಇಡೇರಿಸಿಕೊಳ್ಳಬೇಕು. ಪ್ರಸ್ತುತ ಭಾರತದ ಮುಂದೆ ಇರುವ ಹಲವಾರು ಸವಾಲುಗಳಲ್ಲಿ ಯುವಕರನ್ನು ಮುನ್ನಡೆಸುವ ಜವಾಬ್ದಾರಿ ನಿಸ್ವಾರ್ಥ ಸೇವೆಯ ಸಂಸ್ಥೆಯಾದ ರಾಷ್ಟ್ರೀಯ ಸೇವಾ ಯೋಜನೆಯ ಮೇಲಿದೆ ಎಂದು ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಜಿ. ಕಲ್ಪನಾ ಅವರು ಅಭಿಪ್ರಾಯ ಪಟ್ಟರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶವು ಹಿಂಡಾಲ್ಕೋ ಕಂಪನಿಯ ಸಹಕಾರದೊಂದಿಗೆ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿ, ಆರೋಗ್ಯಕರ ಪರಿಸರವನ್ನು ಉಳಿಸುವ ಮತ್ತು ಬೆಳೆಸುವ ಹೊಣೆಗಾರಿಕೆ ನಮ್ಮೇಲ್ಲರ ಮೇಲಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಶ್ವವಿದ್ಯಾಲಯವು 25000 ಸ್ವಯಂಸೇವಕರನ್ನು ಹೊಂದಿ 267 ಘಟಕಗಳೊಂದಿಗೆ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಸಮಾಜ ಸೇವೆಯ ಬದ್ಧತೆಯಿಂದ ಮುನ್ನಡೆಯುತ್ತಿದೆ. ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸಲು ಅವಕಾಶ ನೀಡಿರುವ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾದ ಪ್ರೊ. ಎಸ್.ಓ.ಹಲಸಗಿ ಮತ್ತು ಹಿಂಡಾಲ್ಕೋ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯಾದ ರವಿ ಬಿಸಗುಪ್ಪಿ ಅವರು ಹಾಜರಿದ್ದರು. ಡಾ.ನಂದಿನಿ ದೇವರಮನಿ ನಿರೂಪಿಸಿದರು, ಸಂಘಟನಾ ಸಮಿತಿಯ ಸದಸ್ಯರಾದ ಶಂಕರ ನಿಂಗನೂರ ಸ್ವಾಗತಿಸಿದರು. ಗಂಗಾಧರ ಅಗಸರ ವಂದಿಸಿದರು.

Related posts: