ಚಿಕ್ಕೋಡಿ:ಎಸಿಬಿ ಅಧಿಕಾರಿಗಳಿಂದ ಎಪಿಎಂಸಿ ಚೆಕಪೋಸ್ಟ ಮೇಲೆ ದಾಳಿ : ನಾಲ್ವರು ಅಧಿಕಾರಿಗಳ ಬಂಧನ
ಎಸಿಬಿ ಅಧಿಕಾರಿಗಳಿಂದ ಎಪಿಎಂಸಿ ಚೆಕಪೋಸ್ಟ ಮೇಲೆ ದಾಳಿ : ನಾಲ್ವರು ಅಧಿಕಾರಿಗಳ ಬಂಧನ
ನಮ್ಮ ಬೆಳಗಾವಿ ಸುದ್ದಿ , ಚಿಕ್ಕೋಡಿ ಮಾ 8 :
ಕಾಗವಾಡ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚೆಕಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಯಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ಹಾಗೂ ಮೂವರು ಸಹಾಯಕರನ್ನು ಬಂಧಿಸಿದ್ದಾರೆ
ಮಾರುಕಟ್ಟೆಯ ಸಹಾಯಕ ಅಧಿಕಾರಿ ಭಂಜಂತ್ರಿ ಹಾಗೂ ಮೂವರು ಸಹಾಯಕರನ್ನು ಬಂಧಿಸಿ, ಒಟ್ಟು 12 ಸಾವಿರ ರೂ. ನಗದು ಹಣವನ್ನು ವಶಪಡುಸಿಕೊಳ್ಳಲಾಗಿದೆ. ಸತತ ನಾಲ್ಕೈದು ಘಂಟೆಗಳ ಕಾಲ ಪರಿಶೀಲನೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಎಸಿಬಿ ಅಧಿಕಾರಿಗಳು ಒಪ್ಪಿಸಿದ್ದಾರೆ