RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ಕೆ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ದೇಶನೂರ ಚಾಲನೆ

ಗೋಕಾಕ:ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ಕೆ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ದೇಶನೂರ ಚಾಲನೆ 

ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ಕೆ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ದೇಶನೂರ ಚಾಲನೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ, 10 ;-

 
ನಗರದ 29 ನೇ ವಾರ್ಡನ ಸೋಮವಾರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರ 189 ರಲ್ಲಿ ಹಮ್ಮಿಕೊಂಡ ಫಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ಬಸವರಾಜ ದೇಶನೂರ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಪಾಲಕರೂ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿ ಇದರಿಂದ ಉಂಟಾಗುವ ಅಂಗವಿಕಲತೆಯಂತಹ ಮಾರಕ ರೋಗವನ್ನು ತಡೆಗಟ್ಟಲು ವಿನಂತಿಸಿದರು.
ಈ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ರಾಧಾ ಕುಲಕರ್ಣಿ, ನಾಗವೇಣಿ ಹಿರೇಮಠ, ಜ್ಯೋತಿ ಹೊಸಮನಿ, ಮಂಗಲಾ ಹಿರೇಮಠ, ರೇಖಾ ಆಲತಗಿ, ಆರೋಗ್ಯ ಕಿರಿಯ ಮಹಿಳಾ ಸಹಾಯಕಿ ಮಾಯಾ ಸುಲ್ತಾನಪೂರ ಸೇರಿದಂತೆ ಅನೇಕರು ಇದ್ದರು.

Related posts: