ಬೆಳಗಾವಿ:ವೈದ್ಯ ಡಾ. ಬಾಬಣ್ಣ ಹುಕ್ಕೇರಿ ಯಡವಟ್ಟು : ಮೂರು ತಿಂಗಳ ಹಸುಗೂಸಿನ ಬೆರಳು ಕಟ್
ವೈದ್ಯ ಡಾ. ಬಾಬಣ್ಣ ಹುಕ್ಕೇರಿ ಯಡವಟ್ಟು : ಮೂರು ತಿಂಗಳ ಹಸುಗೂಸಿನ ಬೆರಳು ಕಟ್
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಮಾ 10 :
ಬ್ಯಾಂಡೆಜ ತಡೆಯಲು ಹೋಗಿ ಮೂರು ತಿಂಗಳ ಹಸುಗೂಸಿನ ಬೆರಳನ್ನೇ ಕತ್ತರಿಸಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ
ನಗರದ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬೆಳಗಾವಿ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯ ಡಾ. ಬಾಬಣ್ಣ ಹುಕ್ಕೇರಿ ಯಡವಟ್ಟು ಮಾಡಿರುವ ವೈದ್ಯ. ಬೈಲಹೊಂಗಲ ತಾಲೂಕು ಕ್ಯಾರಕೊಪ್ಪ ಗ್ರಾಮದ ಉಮೇಶ್ ಪಟ್ಟೇದ ಅವರ ಮಗು ಸೌರಭ ಜ್ವರದಿಂದ ಬಳಲುತ್ತಿತ್ತು. ಆಗ ಪೋಷಕರು ಸೌರಭನನ್ನು ಬೆಳಗಾವಿ ಚಿಲ್ಡ್ರನ್ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಸಲಾಯಿನ್ ಹಾಕಿದ್ದ ಬ್ಯಾಂಡೇಜ್ ತೆಗೆಯುವ ಅವಸರದಲ್ಲಿ ವೈದ್ಯ ಮಗುವಿನ ಬೆರಳು ಕಟ್ ಮಾಡಿದ್ದಾನೆ.
ತುಂಡಾದ ಬೆರಳು ಜೋಡಿಸಲು ವೈದ್ಯ ಡಾ. ಬಾಬಣ್ಣ ಹುಕ್ಕೇರಿ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಉಮೇಶ್ ಪಟ್ಟೇದ ಅವರು ವೈದ್ಯ ಬಾಬಣ್ಣ ಹುಕ್ಕೇರಿ, ನರ್ಸ್ ಆಶ್ವಿನಿ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.