ಬೆಳಗಾವಿ:ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ
ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ
ಬೆಳಗಾವಿ ಜು 6: ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಾರಿ ದರೋಡೆ ನಡೆದಿದೆ .
ಐದು ಜನ ಖದೀಮರ ಗುಂಪು ಕಳ್ಳತನ ನಡೆಸಿದ್ದು, ಸುಮಾರು 12 ಲಕ್ಷ ರೂ.ದೋಚಿಕೊಂಡು ಪರಾರಿಯಾಗಿದ್ದಾರೆ. ಇಂದು ಮುಂಜಾನೆ 10.30ರ ಸುಮಾರಿಗೆ ಘಟನೆ ನಡೆದಿದ್ದು, ಎರಡು ಗಂಟೆಗಳ ಪ್ರಕರಣ ಗಮನಕ್ಕೆ ಬಂದಿದೆ. ಹಣ ಸಮೇತ ಪರಾರಿಯಾದ ಖದೀಮರ ದೃಶ್ಯಾವಳಿಗಳು ಬ್ಯಾಂಕ್‌ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಕಡೆ ಬಜಾರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ