RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅತಿ ಹೆಚ್ಚು ಕಬ್ಬು ಸಾಗಾಣಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟಗೇರಿಯ ಕಬ್ಬು ಕಟಾವು ಗ್ಯಾಂಗ್

ಗೋಕಾಕ:ಅತಿ ಹೆಚ್ಚು ಕಬ್ಬು ಸಾಗಾಣಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟಗೇರಿಯ ಕಬ್ಬು ಕಟಾವು ಗ್ಯಾಂಗ್ 

ಅತಿ ಹೆಚ್ಚು ಕಬ್ಬು ಸಾಗಾಣಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟಗೇರಿಯ ಕಬ್ಬು ಕಟಾವು ಗ್ಯಾಂಗ್

 
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 16 :

 
ಗ್ರಾಮದ ಪ್ರಗತಿಪರ ರೈತ ವಿಜಯ ಸೋಮಗೌಡ್ರ ಅವರ ಟ್ಯಾಕ್ಟರ್‍ನ ದೆವೇಂದ್ರ ಕಕಮರಿ ಮುಂದಾಳತ್ವದ 10 ಜನರ ಕಬ್ಬು ಕಟಾವು ಗ್ಯಾಂಗ್ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಕಟಾವು ಮಾಡಿ ಟ್ಯಾಕ್ಟರ್ ಮೂಲಕ ಉಭಯ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ್ದರಿಂದ ಅತಿ ಹೆಚ್ಚು ಕಬ್ಬು ಸಾಗಾಣಿಕೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಈ ವರ್ಷದ ಕಬ್ಬು ಕಟಾವು ಹಂಗಾಮಿನ ಕೇವಲ ನಾಲ್ಕುವರೆ ತಿಂಗಳಲ್ಲಿ ಕೊಳವಿಯ ಗೋಕಾಕ ಸಕ್ಕರೆ ಕಾರ್ಖಾನೆಗೆ 2980 ಟನ್ ಹಾಗೂ ಸಮೀರವಾಡಿ ಗೋದಾವರಿ ಶುಗರ್ಸ್‍ಗೆ 425 ಟನ್ ಕಬ್ಬು ಸಾಗಾಣಿಕೆ ಸೇರಿ ಒಟ್ಟು 3405 ಟನ್ ಕಬ್ಬುನ್ನು ಕಟಾವು ಮಾಡಿ ಕಾರ್ಖಾನೆಗೆ ಪೂರೈಸಿ ಕೊಳವಿಯ ಗೋಕಾಕ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಮಮದಾಪೂರ ವೃತ್ತಕ್ಕೆ ಗ್ರಾಮದ ಈ ಟ್ಯಾಕ್ಟರ್ ಕಬ್ಬು ಸಾಗಾಣಿಕೆಯಲ್ಲಿ ಈ ವರ್ಷವೂ ಕೂಡಾ ದಾಖಲೆ ನಿರ್ಮಿಸಿದೆ.
ಪ್ರಸಕ್ತ ಕಬ್ಬು ನುರಿಸುವ ಹಂಗಾಮ ಕೊನೆಗೊಳಿಸುವ ಹಿನ್ನಲೆಯಲ್ಲಿ ಶುಕ್ರವಾರ ಮಾ.15 ರಂದು ಟ್ಯಾಕ್ಟರ್ ಹಾಗೂ ಕಬ್ಬು ಕಟಾವು ಗ್ಯಾಂಗ್‍ನಲ್ಲಿರುವ ಎಲ್ಲ ಸದಸ್ಯರು, ಗ್ರಾಮದ ರೈತರು, ಸ್ಥಳೀಯರು ಸಕ್ಕರೆ ಕಾರ್ಖಾನೆ ಸ್ಥಳೀಯ ಪ್ರಮುಖ ಬೀದಿಯಲ್ಲಿ ವಿಜಯೋತ್ಸವ ಆಚರಿಸಿದರು. ಕಬ್ಬು ಕಟಾವು ಗ್ಯಾಂಗ್ ಸದಸ್ಯರಿಗೆ ಕೊಳವಿ ಸಕ್ಕರೆ ಕಾರ್ಖಾನೆ ವತಿಯಿಂದ ಪ್ರಥಮ ಸ್ಥಾನದ ನಿಶಾನೆ ಹಾಗೂ ಬಹುಮಾನ ನೀಡಿ ಸನ್ಮಾನಿಸಿದ್ದಾರೆ.
ಟ್ಯಾಕ್ಟರ್ ಚಾಲಕ ಮಾರುತಿ ಹಾಲಣ್ಣವರ, ಮಲ್ಲಿಕಾರ್ಜುನ ಸೋಮಗೌಡ್ರ, ಈಶ್ವರ ಮುಧೋಳ, ಮಹಾದೇವ ಮಾಳೇದ, ರಾಚಪ್ಪ ಮುರಗೋಡ, ಬಾಳಪ್ಪ ಕೆಂಪನಿಂಗಪ್ಪಗೋಳ, ಮಹಾಂತೇಶ ಸಿದ್ನಾಳ, ಸಿದ್ದಪ್ಪ ಬಾಣಸಿ, ಭೀಮಶೆಪ್ಪ ಹೊಂಗಲ, ಅಶೋಕ ಕೋಣಿ, ಸದಾಶಿವ ದಂಡಿನ ಸೇರಿದಂತೆ ಪ್ರಗತಿಪರ ರೈತ ವಿಜಯ ಸೋಮಗೌಡ್ರ ಟ್ಯಾಕ್ಟರ್ ಕಬ್ಬು ಸಾಗಾಣಿಕೆ ತೊಡ್ನಿ ಗ್ಯಾಂಗ್ ಸದಸ್ಯರು, ರೈತರು, ಇತರರು ಇದ್ದರು.

Related posts: