RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ

ಮೂಡಲಗಿ:ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ 

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ ಮಾಹಿತಿ

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 18:

 

ಮೂಡಲಗಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 21 ಗುರುವಾರದಿಂದ ಪ್ರಾರಂಭವಾಗುತ್ತವೆ. ಒಟ್ಟು 6135 ಮಕ್ಕಳು ಹಾಜರಾಗುತ್ತಿದ್ದು, 7 ಪಟ್ಟಣ ಪ್ರದೇಶ 11 ಗ್ರಾಮೀಣ ಭಾಗಗಳಲ್ಲಿ 18 ಪರೀಕ್ಷಾ ಕೇಂದ್ರಗಳಿವೆ. ಪ್ರಥಮ ಪರೀಕ್ಷೆಯಂದು ಹೊಳಿ ಹಬ್ಬವಿದ್ದು ಅಂದು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿಗಳಿಗೆ ಬಣ್ಣ ಎರಚದೆ ಪರೀಕ್ಷೆ ಸುಗಮವಾಗಿ ಜರುಗಲು ಸಾರ್ವಜನಿಕರು ಸಹಕರಿಸಬೇಕೆಂದು ಮೂಡಲಗಿ ಬಿ.ಇ.ಓ ಅಜೀತ ಮನ್ನಿಕೇರಿ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.
ಅವರು ನಗರದ ಬಿ.ಆರ್.ಸಿ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ತಯಾರಿ ಕುರಿತು ಮಾತನಾಡಿದರು. ಈಗಾಗಲೆ ಪರೀಕ್ಷಾ ಮಂಡಳಿಯವರು ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಗಳನ್ನು ನೇಮಿಸಿದ್ದು ಅವರಿಗೆ ಸಭೆ ಜರುಗಿಸುವ ಮೂಲಕ ನಿಯಮಗಳನ್ನು ತಿಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರು, ಗಾಳಿ ಬೆಳಕಿನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಸೂಕ್ತ ಮುಂಜಾಗ್ರತ ಕ್ರಮವಾಗಿ ಪೋಲಿಸ್ ಬಂದೂ ಬಸ್ತ್‍ನ ವ್ಯವಸ್ಥೆ ಮಾಡಲು ಹೇಳಿದೆ. ನಕಲು ಸಾಮಗ್ರಿಗಳನ್ನು ನಿಷೇಧಿಸಿದ್ದು, ಖಡ್ಡಾಯವಾಗಿ ಮುಖ್ಯಧೀಕ್ಷಕರನ್ನು ಹೊರತು ಪಡಿಸಿ ಯಾರು ಕೂಡಾ ಮೊಬೈಲ್‍ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಿಳಿಸಿದೆ. ಪರೀಕ್ಷಾ ದಿನಗಳಂದು ಕೇಂದ್ರದಲ್ಲಿ 144 ಕಲಂ ನಿಷೇದಾಜ್ಞೆ ಜಾರಿಯಾಗಲಿದ್ದು ಪಾಲಕರು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
ಮೂಡಲಗಿ ವಲಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಹೆಚ್ಚುವರಿ ಬೋಧನೆ ಆಯೋಜಿಸಿದ್ದು, ದಸರಾ ಬಿಡುವಿನಲ್ಲಿ ತರಗತಿಗಳ ಆಯೋಜನೆ ಮಾಡಲಾಗಿದೆ. ಗುಂಪು ಅಧ್ಯಯನ, ಪಾಲಕರ ಸಭೆಗಳು, ಸರಣಿ ಪರೀಕ್ಷೆಗಳು, ಅಣಕು ಪರೀಕ್ಷೆ, ವಿಷಯ ವಿಜಳನೆ, ಮಕ್ಕಳ ಮನೆ ಭೇಟಿ, ಫೋನ್ ಇನ್ ಕಾರ್ಯಕ್ರಮ, ವರ್ಗ ಶಿಕ್ಷಕರಿಗೆ ಆಪ್ತಾಲೋಚನೆ, ಪದವಿಧರ ಶಿಕ್ಷಕರಿಂದ ಪರೀಕ್ಷಾ ಬಿಡುವಿನ ವೇಳೆಯಲ್ಲಿ ತರಗತಿಗಳನ್ನು ಆಯೋಜಿಸಿದೆ. ಪರೀಕ್ಷಾ ಸಂದರ್ಭದಲ್ಲಿ ಅಹಿತಕರ ಘಟನೆಯಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಪರೀಕ್ಷಾ ಮಂಡಳಿಯ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್.ಪಿ ಕೆ.ಎಲ್ ಮೀಶಿ, ಸಿ.ಆರ್.ಪಿ ಬಸವರಾಜ ಪಾಟೀಲ್, ಚಂದ್ರಶೇಖರ ಮೊಹಿತೆ, ಬಿ.ಎಮ್ ನಂದಿ, ಎ.ಬಿ ಚವಡನ್ನವರ, ಶಿವಾನಂದ ಸೋಮವ್ವಗೋಳ ಮತ್ತಿತರರು ಉಪಸ್ಥಿತರಿದ್ದರು.

Related posts: