ಬೆಳಗಾವಿ:ಸಾಲಮನ್ನಾಕ್ಕೆ ಆಗ್ರಹ : ಸಂಸದ ಸುರೇಶ ಆಂಗಡಿ ಮನೆ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ
ಸಾಲಮನ್ನಾಕ್ಕೆ ಆಗ್ರಹ : ಸಂಸದ ಸುರೇಶ ಆಂಗಡಿ
ಮನೆ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ
ಬೆಳಗಾವಿ ಜು 7: ಕೇಂದ್ರ ಸರಕಾರ ಕೂಡಾ ರೈತರ ಸಾಲಾಮನ್ನಾ ಮಾಡುವಂತೆ ಆಗ್ರಹಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ಅವರ ಮನೆ ಬಳಿ ಇಂದು ಪ್ರತಿಭಟನೆ ನಡೆಸಿದರು
ಬಿಜೆಪಿ ಸಂಸದ ಸುರೇಶ ಅಂಗಡಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಯುಥ್ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುವಂತೆ ಸಂಸದರಿಗೆ ಆಗ್ರಹಿಸಿದರು.
ಈ ವೇಳೆ ಸಂಸದ ಸುರೇಶ್ ಅಂಗಡಿ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.