RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಅಶೋಕ ನಾಯಿಕ , ಉಪಾಧ್ಯಕ್ಷರಾಗಿ ವಿಠಲ ಪಾಟೀಲ ಅವಿರೋಧ ಆಯ್ಕೆ

ಗೋಕಾಕ:ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಅಶೋಕ ನಾಯಿಕ , ಉಪಾಧ್ಯಕ್ಷರಾಗಿ ವಿಠಲ ಪಾಟೀಲ ಅವಿರೋಧ ಆಯ್ಕೆ 

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಅಶೋಕ ನಾಯಿಕ , ಉಪಾಧ್ಯಕ್ಷರಾಗಿ ವಿಠಲ ಪಾಟೀಲ ಅವಿರೋಧ ಆಯ್ಕೆ

 

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮಾ 25 :

 
ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕುಲಗೋಡ ಗ್ರಾಮದ ಅಶೋಕ ಮುದಕಪ್ಪ ನಾಯಿಕ ಹಾಗೂ ಉಪಾಧ್ಯಕ್ಷರಾಗಿ ರಾಜಾಪೂರ ಗ್ರಾಮದ ವಿಠಲ ಉದ್ದಪ್ಪ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರದಂದು ಸಂಘದ ಕಾರ್ಯಾಲಯದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಶೋಕ ನಾಯಿಕ ಅಧ್ಯಕ್ಷರಾಗಿ ಹಾಗೂ ವಿಠ್ಠಲ ಪಾಟೀಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಬಿ.ಕೆ. ಗೋಖಲೆ ಪ್ರಕಟಿಸಿದರು.
ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಗೋಖಲೆ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪಕ ಎಚ್.ವಾಯ್. ಐನಾಪೂರ ಉಪಸ್ಥಿತರಿದ್ದರು.
ಅಭಿವೃದ್ಧಿಗೆ ಶ್ರಮಿಸುವೆ : ಜಾರಕಿಹೊಳಿ ಸಹೋದರರು ಹಾಗೂ ಹಿರಿಯ ಸಹಕಾರಿ ಬಸಗೌಡ ಪಾಟೀಲ(ನಾಗನೂರ) ಅವರ ಸಮರ್ಥ ಮಾರ್ಗದರ್ಶನದಲ್ಲಿ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆಂದು ನೂತನ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು.
ಸಂಘದ ಕಾರ್ಯಾಲಯದಲ್ಲಿ ಆಡಳಿತ ಮಂಡಳಿಯವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವರು ಹಾಗೂ ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಖ್ಯಾತ ಉದ್ಯಮಿ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಹಾಗೂ ಹಿಂದಿನ ಅಧ್ಯಕ್ಷ ಹಾಗೂ ಹಿರಿಯ ಸಹಕಾರಿ ಮುಖಂಡ ಬಸಗೌಡ ಪಾಟೀಲ ಅವರುಗಳು ನನ್ನ ಮೇಲೆ ವಿಶ್ವಾಸವನ್ನಿಟ್ಟು ಹೊಸ ಜವಾಬ್ದಾರಿ ನೀಡಿದ್ದಾರೆ. ಅವರುಗಳ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗದೇ ಸಂಘದ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಎಪಿಸಿಎಂಎಸ್ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು.
ಜಾರಕಿಹೊಳಿ ಸಹೋದರರ ಆಶೀರ್ವಾದದಿಂದ 1989ರಿಂದ ಇಲ್ಲಿಯವರೆಗೆ ಸತತ 7 ಅವಧಿಗೆ ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕನಾಗಿ, 20 ವರ್ಷಗಳಿಂದ ಗೋಕಾಕ ಎಪಿಎಂಸಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸಹಕಾರಿ ರಂಗದ ಬೆಳವಣಿಗೆಯೇ ತಮ್ಮ ಪ್ರಮುಖ ಧ್ಯೇಯವಾಗಿದ್ದು, ಜಾರಕಿಹೊಳಿ ಸಹೋದರರಿಗೆ ಎಂದೆಂದಿಗೂ ಚಿರಋಣಿಯಾಗಿರುವುದಾಗಿ ಅಶೋಕ ನಾಯಿಕ ಹೇಳಿದರು.
ಉಪಾಧ್ಯಕ್ಷ ವಿಠ್ಠಲ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮಾತನಾಡಿ, ತಾಲೂಕಿನ ಬಹುತೇಕ ಚುನಾವಣೆಗಳು ಅವಿರೋಧವಾಗಿ ಆಯ್ಕೆಯಾಗುತ್ತಿರುವುದು ಜಾರಕಿಹೊಳಿ ಸಹೋದರರ ಸಮರ್ಥ ನಾಯಕತ್ವವೇ ಕಾರಣವೆಂದು ಶ್ಲಾಘಿಸಿದರು.
ಸಂಘದ ನಿರ್ದೇಶಕರಾದ ಬಸಗೌಡ ಪಾಟೀಲ(ಮೆಳವಂಕಿ), ಈಶ್ವರ ಬೆಳಗಲಿ, ಗುರುನಾಥ ಕಂಕಣವಾಡಿ, ಸುಭಾಸ ಹುಕ್ಕೇರಿ, ಗಂಗವ್ವ ಜೈನ್, ಲುಬನಾ ದೇಸಾಯಿ, ಪ್ರಭಾಕರ ಬಂಗೆನ್ನವರ, ವೆಂಕನಗೌಡ ಪಾಟೀಲ, ಕೆಂಚಪ್ಪ ಮಂಟೂರ, ಸುರೇಶ ಗುಡ್ಡಾಕಾರ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಸಗೌಡ ಪಾಟೀಲ(ನಾಗನೂರ) ಅವರು 1975 ರಿಂದ 1980, 1983 ರಿಂದ 1986, 2002 ರಿಂದ 2019 ರವರೆಗೆ ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಒಟ್ಟು 25 ವರ್ಷಗಳ ಸೇವೆಯನ್ನು ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

 

Related posts: