RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ ಟೆಂಡರ್ ರದ್ದು ಪಡಿಸುವಂತೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ

ಗೋಕಾಕ:ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ ಟೆಂಡರ್ ರದ್ದು ಪಡಿಸುವಂತೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ 

ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ ಟೆಂಡರ್ ರದ್ದು ಪಡಿಸುವಂತೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 27 :
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ , ಜೈನ್ ಇರಿಗೇಶನ್ ಕಂಪನಿಯವರಿಗೆ ನೀಡಿರುವ 24/7 ಕುಡಿಯುವ ನೀರು ಸರಬರಾಜು ಟೆಂಡರ್ ರದ್ದು ಪಡಿಸಿ, ನಗರಸಭೆಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ನಗರಸಭೆ ಸದಸ್ಯರು ಹಾಗೂ ನಗರದ ವಿವಿಧ ಸಂಘಟನೆಗಳು ಇಂದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿಸಿದರು.

ಬುಧವಾರದಂದು ನಗರದ ಸಂಗೋಳ್ಳಿರಾಯಣ್ಣ ವೃತ್ತದಲ್ಲಿರುವ ನಗರರಸಭೆ ಎದುರು ಸೇರಿದ ಪ್ರತಿಭಟನಾಕಾರರು ನಗರಸಭೆ ಅಧಿಕಾರಿಗಳು ಮತ್ತು ಜೈನ್ ಇರಿಗೇಶನ್ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿ ಪೌರಾಯುಕ್ತರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಹಿರಿಯ ಸದಸ್ಯ ಎಸ್ ಎ ಕೋತವಾಲ ಜೈನ್ ಇರಿಗೇಶನ್ ಕಂಪನಿ ಹಾಗೂ ಸಂಭಂದಪಟ್ಟ ಅಧಿಕಾರಿಗಳಿಗೆ ಇದು ನಮ್ಮ ಕೊನೆಯ ಮನವಿಯಾಗಿದ್ದು. ಇದನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ ಕಠಿಣ ನಿರ್ಧಾರ ತಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಶಿವಾನಂದ ಹತ್ತಿ, ಪ್ರಕಾಶ ಮುರಾರಿ, ಅಬ್ಬಾಸ ದೇಸಾಯಿ, ಬಸವರಾಜ ಆರೆನ್ನವರ, ಕರವೇ ಅಧ್ಯಕ್ಷ ಕಿರಣ ಢಮಾಮಗರ , ಮುಖಂಡರಾದ ಮಲ್ಲಿಕಾರ್ಜುನ ಹೊಸಪೇಠ, ಅನಿಲ ಮುರಾರಿ, ವಿಜಯ ಜತ್ತಿ, ಅಡಿವೆಪ್ಪ ಮೆಲ್ಮಟ್ಟಿ, ವಿಜಯ ಅರಭಾಂವಿ, ಬಸವರಾಜ ದೇಶನೂರ, ಯಲ್ಲಪ್ಪ ಹಳ್ಳೂರ, ಮುರುಗೇಶ ಹುಕ್ಕೇರಿ ಸೇರಿದಂತೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಇದ್ದರು.

Related posts: