ಮೂಡಲಗಿ:ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ವಿಶೇಷ ತರಗತಿಗಳ ಆಯೋಜನೆ
ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ವಿಶೇಷ ತರಗತಿಗಳ ಆಯೋಜನೆ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 31 :
ತಾಲೂಕಿನಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ಎಲ್ಲ ಪ್ರೌಢ ಶಾಲೆಗಳಲ್ಲಿ ಪದವಿಧರ ಹಾಗೂ ವಿಷಯ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ಆಯೋಜಿಸಿ ವಿಷಯ ಉಜಳನ ಕಾರ್ಯಮಾಡಲಾಗುತ್ತಿದೆ ಎಂದು ಬಿ.ಇ.ಒ ಅಜೀತ ಮನ್ನಿಕೇರಿ ಹೇಳಿದರು.
ಅವರು ರವಿವಾರದಂದು ತಾಲೂಕಿನಲ್ಲಿರುವ ಎಲ್ಲ ಪ್ರೌಢ ಶಾಲೆಗಳಲ್ಲಿ ವಿಜ್ಞಾನ ವಿಷಯದ ಕುರಿತು ವಿಶೇಷ ತರಗತಿಗಳನ್ನು ಆಯೋಜಿಸಿದ ಕುರಿತು ಮಾತನಾಡಿದರು. ಮೂಡಲಗಿ ವಲಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಂದು ಮುಂಬರುವ ವಿಷಯದ ಕುರಿತು ನುರಿತ ಸಂಪನ್ಮೂಲ ಶಿಕ್ಷಕರಿಂದ ತರಗತಿಗಳನ್ನು ಆಯೋಜಿಸಿದೆ. ಕ್ಲೀಷ್ಠಕರ, ಬಹು ಅಂಕಗಳ ಪ್ರಶ್ನೆ, ನಕ್ಷೆ ಹಾಗೂ ಪರೀಕ್ಷೆಯನ್ನು ಬರೆಯುವ ಕ್ರಮಗಳ ಕುರಿತು ವಿಶ್ಲೇಷನೆ ಮಾಡುವದು. ಪರೀಕ್ಷಾರ್ಥಿಗಳಿಗೆ ಬಿಡುವಿನ ಸಮಯದ ಸದುಪಯೋಗ ಹಾಗೂ ಹೆಚ್ಚು ಅಂಕಗಳಿಕೆಗೆ ಸಹಾಯಕವಾಗುವದು ಎಂದು ಹೇಳಿದರು.
ವಲಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಬಿಡುವಿನ ದಿನಗಳಲ್ಲಿ ತರಗತಿಗಳು ನಡೆದಿರುವ ಕುರಿತು ಮೇಲ್ವಿಚಾರಕರಾಗಿ ನೋಡಲ್ ಅಧಿಕಾರಿ ಎಸ್.ಎ ನ್ಯಾಮಗೌಡರ, ಬಿ.ಆರ್.ಸಿ ಬಿ.ಎಚ್ ಮೋರೆ, ಇಸಿಒ ಟಿ ಕರಿಬಸವರಾಜು, ಬಿಆರ್‍ಪಿಗಳಾದ ಪಿ.ಜಿ.ಪಾಟಿಲ, ಬಿ.ಎಮ್ ನಂದಿ, ಎ.ಬಿ.ಚವಡನ್ನವರ, ಕೆ.ಎಲ್ ಮೀಶಿ ಕಾರ್ಯನಿರ್ವಹಿಸಿದರು.
ವಲಯ ವ್ಯಾಪ್ತಿಯ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಯರು, ವಿಷಯ ಶಿಕ್ಷಕರು ನೇರೆಹೊರೆಯ ಪ್ರಾಥಮಿಕ ಶಾಲೆಗಳಲ್ಲಿಯ ಪದವಿಧರ ಶಿಕ್ಷಕರು ನಿಯೋಜನೆಯ ಮೇಲೆ ವಿಶೇಷ ತರಗತಿಗಳನ್ನು ಜರುಗಿಸಿದರು.