RNI NO. KARKAN/2006/27779|Monday, December 23, 2024
You are here: Home » breaking news » ಯರಗಟ್ಟಿ:ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್

ಯರಗಟ್ಟಿ:ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್ 

ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್

ನಮ್ಮ ಬೆಳಗಾವಿ ಸುದ್ದಿ , ಯರಗಟ್ಟಿ ಏ 4 :

ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಸಾಧುನವರ ಸಮೀಪದ ಮುಗಳಿಹಾಳ ಗ್ರಾಮಕ್ಕೆ ಆಗಮಿಸಿದ್ದರು. ಪ್ರಚಾರ ಸಭೆಯಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದ ಚೋಪ್ರಾ ಅನುಪಸ್ಥಿತಿ ಎದ್ದು ಕಾಣುತಿತ್ತು.

ಇದರಿಂದಾಗಿ ಅವರ ಅಭಿಮಾನಿಗಳು ನೇರವಾಗಿ ಪಕ್ಷದ ನಾಯಕರು ಮತ್ತು ಅಭ್ಯರ್ಥಿ ಮೇಲೆ ಅಸಮಾಧಾನ ಹೊರಹಾಕಿದರು, ಆನಂದ ಚೋಪ್ರಾರವರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ. ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದು ಆಕ್ರೋಶ ಹೊರಹಾಕಿದರು.

ಇದರಿಂದ ವಿಚಲಿತರಾದ ವಿ.ಎಸ್ ಸಾಧುನವರ ಮುಂದಿನ ದಿನಗಳಲ್ಲಿ ಅವರೂ ಪ್ರಚಾರಕ್ಕೆ ಬರುವರೆಂದು ಚೋಪ್ರಾ ಬೆಂಬಲಿಗರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು.

ಸಭೆಯಲ್ಲಿ ವಿಶ್ವಾಸ ವೈಧ್ಯ, ಡಿ.ಡಿ ಟೊಪೋಜಿ, ರವೀಂದ್ರ ಯಲಿಗಾರ, ಭೀಮಶೆಪ್ಪಾ ಅರಭಾಂವಿ ಸಂತೋಷ ಹಾದಿಮನಿ, ವೀರನಗೌಡ ಪಾಟೀಲ, ರಾಜು ದಳವಾಯಿ, ಸಂಜು ದಳವಾಯಿ ಸೇರಿದಂತೆ ಅನೇಕ ಚೋಪ್ರಾ ಬೆಂಬಲಿಗರು ಉಪಸ್ಥಿತರಿದ್ದರು.

Related posts: