ಘಟಪ್ರಭಾ:ದಿ .06 ರಿಂದ 08 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವ
ದಿ .06 ರಿಂದ 08 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 4 :
ಸಮೀಪದ ಅರಭಾಂವಿ ಮಠದ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವವು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಏಪ್ರೀಲ್ 06 ರಿಂದ 08 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ದಿ.06 ರಂದು ಬೆಳಿಗ್ಗೆ 8-00 ಗಂಟೆಗೆ ಷಟ್‍ಸ್ಥಲ ಧ್ವಜಾರೋಹಣ ಹಾಗೂ ಯುಗಾದಿ ಪಾಡ್ಯೆ ಪಂಚಾಂಗ ಶ್ರವಣ ಕಾರ್ಯಕ್ರಮ ಹಾಗೂ ಬೆಳಿಗ್ಗೆ 9-00 ಗಂಟೆಗೆ ಹಿಟ್ಟಣಿಯ ಶ್ರೀ ಪ್ರಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ ನೆರೆವೇರುವುದು.
ದಿ.07 ರಂದು ಬೆಳಿಗ್ಗೆ 6-00 ಕ್ಕೆ ಕರ್ತೃ ಗದ್ದುಗೆಗೆ ಮಾಹಾರುದ್ರಾಭಿಷೇಕ, 8-00 ಗಂಟೆಗೆ ಅರಭಾಂವಿ ಗ್ರಾಮದಿಂದ ಮಠದವರೆಗೆ ಸುಮಂಗಲೆಯರಿಂದ ಕುಂಭ ಮೇಳಗಳೊಂದಿಗೆ ಪೂಜ್ಯರ ಭವ್ಯ ಸ್ವಾಗತ ಹಾಗೂ ಮಧ್ಯಾಹ್ನ 12 ಗಂಟೆಗೆ ನಾಡಿನ ಸರ್ವ ಸದ್ಭಕ್ತರಿಂದ ಪಲ್ಲಕ್ಕಿ ಮಹೋತ್ಸವ ಜರಗುವುದು. ಸಂಜೆ 4-00 ಗಂಟೆಗೆ ರಾಜ್ಯ ಮಟ್ಟದ ಕುಸ್ತಿ ಪ್ರದರ್ಶನ ಜರುಗಲಿವೆ.
ಸಂಜೆ 6-00 ಗಂಟೆಗೆ ಗುರುವಂದನಾ ಸಮಾರಂಭ ಹಾಗೂ ಧರ್ಮ ಚಿಂತನ ಗೋಷ್ಠಿ ಜರುಗಲಿದ್ದು, ಗೋಷ್ಠಿಯ ಪಾವನ ಸಾನಿಧ್ಯವನ್ನು ಎಡೆಯೂರ ತೋಂಟದಾರ್ಯ ಮಠದ ಗದಗ-ಡಂಬಳ ಹಾಗೂ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಜಗದ್ಗುರು ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ನೇತೃತ್ವವನ್ನು ಆಡಿ-ಹಂದಿಗುಂದ ವಿರಕ್ತಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು,
ಅಧ್ಯಕ್ಷತೆಯನ್ನು ಘಟಪ್ರಭಾ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಮ್ಮುಖ ಕಡಕೋಳ ವಿರಕ್ತಮಠÀದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಬೆಂಗಳೂರು ಶಿವಯೋಗೀಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕಡೋಲಿ ವಿರಕ್ತಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಘಟಪ್ರಭಾ ಹೊಸಮಠದ ಶ್ರೀ ವಿರುಪಾಕ್ಷಿ ದೇವರು ಉಪಸ್ಥಿತರಿರುವರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಾನಂದ ಕೌಜಲಗಿ ಅವರನ್ನು ಸನ್ಮಾನಿಸಲಾಗುವುದು. ಚಿಂತನ ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತದೇವರು ನೆರವೇರಿಸಲಿದ್ದಾರೆ.
ದಿ.8 ರಂದು ಬೆಳಿಗ್ಗೆ 8-00 ಗಂಟೆಯಿಂದ ವಿವಿಧ ಪ್ರಕಾರದ ಶರ್ತುಗಳು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.