ಗೋಕಾಕ:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿವೆ : ರಮೇಶ ಅಳಗುಂಡಿ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿವೆ : ರಮೇಶ ಅಳಗುಂಡಿ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 4 :
ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಕಳೆದ ಮಾಚ್.21ರಂದು ಆರಂಭಗೊಂಡ 10ನೇ ತರಗತಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಗುರುವಾರ ಮಾರ್ಚ್.4 ರಂದು ನಡೆದ ಹಿಂದಿ ವಿಷಯದ ಪರೀಕ್ಷೆ ಸೇರಿದಂತೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿದವು.
ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಇಂದು ಸಹ ಒಟ್ಟು 315 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಇಲ್ಲಿಯ ಪರೀಕ್ಷಾ ಕೇಂದ್ರದ ಸುತ್ತಮುತ್ತ ಸುಮಾರು 200 ಮೀಟರ್ ಅಂತರದಲ್ಲಿ 144 ಕಲಂ ನೀಷೆದಾಜ್ಞೆ ಜಾರಿಗೊಳಿಸಲಾಗಿತ್ತು. ನಕಲು ನಡೆಯದಂತೆ ಸಿಸಿ ಕ್ಯಾಮರಾ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜನೆ ಮಾಡಲಾಗಿತ್ತು ಎಂದು ಸ್ಥಳೀಯ ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮೇಶ ಅಳಗುಂಡಿ ತಿಳಿಸಿದರು.
ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ 14 ಪರೀಕ್ಷಾ ಕೊಠಡಿ, 15 ಜನ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಒಬ್ಬರು ಸ್ಥಾನಿಕ ವಿಕ್ಷಕ ಜಾಗೃತ ದಳ, ಒಬ್ಬರು ಪರೀಕ್ಷಾ ಮುಖ್ಯ ಅಧಿಕ್ಷಕ ಒಬ್ಬರು, ಓರ್ವ ಕಸ್ಟೊಡಿಯನ್, ಒಬ್ಬರು ಪರೀಕ್ಷಾ ಕೇಂದ್ರದ ಸಹಾಯಕರು ಸೇರಿದಂತೆ ಮತ್ತಿತರು ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.
ಗುರುವಾರದಂದು ಹಿಂದಿ ವಿಷಯದ ಕೊನೆಯ ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳು ಬರೆದು, ಪರೀಕ್ಷಾ ಅವಧಿ ಬಳಿಕ ಪ್ರಶ್ನೆಗಳಿಗೆ ಉತ್ತರಿಸಿರುವ ಅಂಕಗಳ ಕುರಿತು ತಮ್ಮ ತಮ್ಮಲ್ಲಿ ಲೆಕ್ಕಾಚಾರ ಮಾಡುತ್ತಾ ನಗು ಮೊಗದಲ್ಲಿ ಪರೀಕ್ಷಾ ಕೇಂದ್ರದ ಕೊಠಡಿಯಿಂದ ಹೊರ ಬಂದರು. ಪರೀಕ್ಷೆ ಮುಗಿದ ಸಂತಸದ ಕ್ಷಣಗಳನ್ನ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾ ತಮ್ಮ ಮನೆ ಕಡೆ ಹೆಜ್ಜೆ ಹಾಕಿದರು.