ಬೆಳಗಾವಿ:ಕೊಟ್ಟ ಮಾತು ತಪ್ಪಿದ ನಾಡದ್ರೋಹಿಗಳು : 48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್
ಕೊಟ್ಟ ಮಾತು ತಪ್ಪಿದ ನಾಡದ್ರೋಹಿಗಳು : 48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್!
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 5 :
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ದೇಶದ ಗಮನ ಸೆಳೆಯುವ ಸಲುವಾಗಿ ಈ ಸಲ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮುಖಂಡರಿಗೆ 48 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಸಾಧ್ಯವಾಗಿದೆ.
‘101 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದ್ದೇವು. ಪ್ರಚಾರಕ್ಕೆ ಸಮಯಾವಕಾಶ ಸಾಕಾಗಲಿಲ್ಲ. ಹೀಗಾಗಿ ನಾವು ಅಂದುಕೊಂಡಷ್ಟು ಅಭ್ಯರ್ಥಿಗಳನ್ನು ಇಳಿಸಲು ಸಾಧ್ಯವಾಗಲಿಲ್ಲ’ ಎಂದು ಎಂಇಎಸ್ ಮುಖಂಡ ವಿಕಾಸ ಕಲಘಟಗಿ ಹೇಳಿದರು.