RNI NO. KARKAN/2006/27779|Friday, October 18, 2024
You are here: Home » breaking news » ನೇಗಿನಹಾಳ :ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ

ನೇಗಿನಹಾಳ :ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ 

ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ

 
ನಮ್ಮ ಬೆಳಗಾವಿ ಸುದ್ದಿ , ಏ 5 : ನೇಗಿನಹಾಳ
ಸಮೀಪದ ನೇಗಿನಹಾಳ-ಕೆಸರಕೋಪ್ಪ ಗ್ರಾಮಗಳ ಮದ್ಯದಲ್ಲಿರುವ ಸರಕಾರಿ ಡಿ.ಪಿ.ಇ.ಪಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಹತ್ತಿರ ಚರಂಡಿಯಲ್ಲಿ ಕಸ ತುಂಬಿ ಸುಮಾರು 15 ದಿನಗಳಿಂದ ರಸ್ತೆಯ ಮೇಲೆ ಕೊಳಚೆಯ ನೀರು ಹರಿಯುತ್ತಿರುವುದರಿಂದ ಪಕ್ಕದಲ್ಲಿಯೇ ಇರುವ ಅಂಗನವಾಡಿ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ, ಹಾಗೂ ಕೆ.ವಿ.ಜ್ಹಿ ಬ್ಯಾಂಕ್ ಪ್ರತಿನಿಧಿಯ ಬೇಟಿಯಾಗಲು ಬರುವ ಕೆಸರಕೊಪ್ಪ, ನೇಗಿನಹಾಳ ಗ್ರಾಮಗಳ ಜನರು ಹಾಗೂ ಪ್ರತಿನಿತ್ಯ ನಡೆದಾಡುವ ಶಾಲಾ ಮಕ್ಕಳು, ಸಾರ್ವಜನಿಕರು ಆ ಪ್ರದೇಶ ಬಂದರೆ ಮುಗಿನ ಮೇಲೆ ಕೈಹಿಡಿದುಕೊಂಡು ನಡೆಯುವ ಪರಿಸ್ಥಿತಿ ಎದರಾಗಿದೆ.
ಚರಂಡಿಯಲ್ಲಿ ಕಸ ತುಂಬಿಕೊಂಡು ಕೊಳಚೆಯ ನೀರು ರಸ್ತೆಯ ಮೇಲೆಯ ಹರಿಯುತ್ತಿದ್ದು ಸುಮಾರು 15 ದಿನಗಳ ಕಳೆದರು ಅಲ್ಲಿನ ಜನಪ್ರತಿನಿಧಿಗಳು ಇದರ ಕುರಿತು ಲಕ್ಷ್ಯವಹಿಸಿಲ್ಲ, ಇದು ಗ್ರಾಮದ ಮದ್ಯ ಭಾಗದಲ್ಲಿರುವ ಬಜಾರ ರಸ್ತೆಯ ಪ್ರಮುಖ ಬೀದಿಗಳಿಂದ ಚರಂಡಿಯ ಕೊಳಚೆ ನೀರು ಪ್ರತಿನಿತ್ಯ ತುಂಬಿಕೊಂಡು ಹರಿಯುತ್ತಿದ್ದು ಇಲ್ಲಿನ ಮನೆಗಳಿಂದ ಮಲ-ಮೂತ್ರದಿಂದ ತುಂಬಿದ ತ್ಯಾಜ ನೀರು ಹರಿಯುತ್ತದೆ. ಇನ್ನು ಮಳೆಗಾಲ ಆರಂಭವಾದರೆ ಅಲ್ಲಿ ವಾಸಿಸುವ ಜನರ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗುವುದು. ಆದಷ್ಟು ಬೇಗನೆ ಚರಂಡಿಯಲ್ಲಿ ನಿಂತಿರುವ ಕಸವನ್ನು ಸ್ವಚ್ಛಗೊಳಿಸಿ ರಸ್ತೆಯ ಮೇಲೆ ಹರಿಯುತ್ತಿರುವ ಮಾಲಿನ್ಯಯುತ ತ್ಯಾಜ ನೀರಿಗೆ ಮುಕ್ತಿ ಹಾಡಬೇಕು ಇಲ್ಲವಾದರೇ ಇಲ್ಲಿ ಸೂತ್ತಮುತ್ತಲು ವಾಸಿಸುವ ಜನರು ಗ್ರಾಮ ಪಂಚಾಯತಿಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆಯ ನಡೆಸುವುದಾಗಿ ತಿಳಿಸಿದ್ದಾರೆ.

Related posts: