ಘಟಪ್ರಭಾ:ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ಕಾರ್ಯಕ್ರಮ
ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ಕಾರ್ಯಕ್ರಮ
ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಏ 5 :
ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ತರಕಾರಿ ಮಾರುಕಟ್ಟೆಯಾದ ಇಲ್ಲಿಯ ಮಲ್ಲಾಪೂರ ಪಿಜಿಯಲ್ಲಿ ಶುಕ್ರವಾರದಂದು ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ನಡೆಯಿತು.
ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾದ ಪ್ರಮೋದ ಜೋಶಿ ಮಾತನಾಡುತ್ತ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ದಿಟ್ಟ ನಿರ್ಣಯ ಹಾಗೂ ರೈತರಿಗಾಗಿ ಮಾಡಿದ ಅನೇಕ ಸೌಲಭ್ಯಗಳ ಕುರಿತು ಹೇಳಿದರು. ಇಡೀ ವಿಶ್ವದಲ್ಲಿ ಭಾರತವು ತನ್ನದೇ ಆದ ನಿರ್ಣಯಗಳನ್ನು ತೆಗೆದುಕೊಂಡು ವಿಶ್ವದ ಅತೀ ದೊಡ್ಡ ದೇಶಗಳಲ್ಲಿ 4ನೇ ಸ್ಥಾನಕ್ಕೆ ಬಂದಿದೆ. ಅವರು ದೇಶಕ್ಕಾಗಿ ಮಾಡಿದ ಮಹತ್ ಕಾರ್ಯ ನೋಡಿ ತಾವೆಲ್ಲರೊ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವದರೊಂದಿಗೆ ಬೆಳಗಾವಿ ಲೋಕಸಭಾ ಅಭ್ಯರ್ಥಿ ಸುರೇಶ ಅಂಗಡಿ ಅವರು ಗೆಲ್ಲಿಸಿ ನರೇಂದ್ರ ಮೋದಿಯವರೇ ಪ್ರಧಾನಿಯಾಗಲು ಶ್ರಮಿಸÀಬೇಕು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಲಕ್ಷ್ಮಣ ತಪಶಿ, ಜಿ.ಎಸ್. ರಜಪೂತ, ಸುರೇಶ ಪಾಟೀಲ, ಮಹಾವೀರ ಇಂಗಳೆ ಮುಂತಾದವರು ಇದ್ದರು.