RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ

ಘಟಪ್ರಭಾ:ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ 

ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :

 
ಚಿಕ್ಕೋಡಿಯಲ್ಲಿ ಎಪ್ರಿಲ್ 18 ರಂದು ನಿರ್ಧರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಚುನಾವಣಾ ಪ್ರಚಾರವನ್ನು ಘಟಪ್ರಭಾದಲ್ಲಿ ಮಾಡಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದು ಈ ಕಾರಣಕ್ಕೆ ಸಂಸದ ಸುರೇಶ ಅಂಗಡಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಈರಣ್ಣ ಕಡಾಡಿಯವರು ಇಂದು ಸಂಜೆ ಇಲ್ಲಿಗೆ ಆಗಮಿಸಿ ಕರ್ನಾಟಕ ಆರೋಗ್ಯ ಧಾಮದಲ್ಲಿ ಸ್ಥಳ ಪರಿಶೀಲಿಸಿ ಆಡಳಿತ ಮಂಡಳಿಯವರೊಡನೆ ಚರ್ಚಿಸಿದರು.
ಆಡಳಿತ ಮಂಡಳಿಯ ಟ್ರಸ್ಟಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ|| ಘನಶ್ಯಾಮ ವೈದ್ಯರ ಜೊತೆ ಚರ್ಚೆ ಮಾಡಿದರು ಕರ್ನಾಟಕ ಆರೋಗ್ಯ ಧಾಮ ರಾಜಕೀಯ ಹೊರತಾಗಿರುವುದರಿಂದ ತಮ್ಮ ಒಪ್ಪಿಗೆಯನ್ನು ನೀಡಲಿಲ್ಲ ಹಾಗೂ ಈ ಬಗ್ಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದರು.
ಈ ಬಗ್ಗೆ ಬಾಲಚಂದ್ರ ಜಾರಕಿಹೊಳಿಯವರು ಸುದ್ದಿಗಾರರೊಂದಿಗೆ ಮಾತನಾಡಿ ಘಟಪ್ರಭಾವು ಚಿಕ್ಕೋಡಿ ಮತ್ತು ಬೆಳಗಾವಿಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಕ್ಕೆ ಹತ್ತಿರವಾಗಿರುವುದರಿಂದ ಹಾಗೂ ಮೋದಿಯವರು ಇನ್ನು ಗೋಕಾಕ ತಾಲೂಕಿಗೆ ಬಾರದ ಕಾರಣ ಘಟಪ್ರಭಾದಲ್ಲಿ ಕಾರ್ಯಕ್ರಮ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೆಎಚ್‍ಐ ಆಡಳಿತ ಮಂಡಳಿಯವರು ನಾಳೆ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದರು.
ಸಂಸದ ಸುರೇಶ ಅಂಗಡಿಯವರು ಮಾತನಾಡಿ ಕಳೆದ ಬಾರಿ ನೀಡಿದ ಕೆಲವು ಭರವಸೆ ನಮ್ಮಿಂದ ಈಡೇರಿಸಲು ಸಾಧ್ಯವಾಗಿಲ್ಲ ಆದರೆ ಈ ಬಾರಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿ ಎಲ್ಲಾ ಭರವಸೆಯನ್ನು ಈಡೇರಿಸುತ್ತೇವೆ ಮತ್ತು ಮೋದಿ ಕಾರ್ಯಕ್ರಮಕ್ಕಾಗಿ ಇನ್ನೂ ಕೆಲವು ಸ್ಥಳವನ್ನು ಪರೀಶಿಲಿಸುತ್ತಿದ್ದೇವೆ ಕೆಎಚ್‍ಐ ಸೂಕ್ತ ಸ್ಥಳವಾಗಿದ್ದರಿಂದ ಅವಕಾಶ ನೀಡಲು ವಿನಂತಿಸಿ ಕೊಂಡಿದ್ದೇವೆ ಅವರು ಒಪ್ಪಿಗೆ ನೀಡಿದರೆ ಭದ್ರತಾ ತಂಡ ಬಂದು ಸ್ಥಳವನ್ನು ಪರೀಶಿಲಿಸಿ ಒಪ್ಪಿಗೆ ಸೂಚಿಸಿದ ನಂತರ ದಿ.18 ರಂದು ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಘಟಪ್ರಭಾದಲ್ಲಿ ನೆರವೇರಿಸುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರು ಕಾರ್ಯಕರ್ತರು ಇದ್ದರು.

Related posts: