ಗೋಕಾಕ:ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ : ಜೆ.ಎಮ್.ನದಾಫ್
ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ : ಜೆ.ಎಮ್.ನದಾಫ್
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 8 :
ಇದೇ ಏಪ್ರೀಲ್.23 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಗ್ರಾಮದಲ್ಲಿರುವ ಯುವಕರು, ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿ ಜೆ.ಎಮ್.ನದಾಫ್ ತಿಳಿಸಿದ್ದಾರೆ.
ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಪ್ರಯುಕ್ತ ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದಲ್ಲಿ ಸೋಮವಾರ ಏಪ್ರಿಲ್.8ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸರ್ಕಾರ ನಗರ, ಪಟ್ಟಣ, ಹಳ್ಳಿಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಮತ್ತು ಮತದಾನದ ಕುರಿತು ತಿಳುವಳಿಕೆ ಮೂಡಿಸಲು ಹಲವಾರು ಪ್ರಾಯೋಗಿಕ ಪ್ರಯತ್ನಗಳ ಮೂಲಕ ಪ್ರಯತ್ನಿಸುತ್ತಿದೆ. ಅಲ್ಲದೇ ತಮ್ಮ ಅಕ್ಕ-ಪಕ್ಕದ ಸ್ನೇಹಿತರಿಗೆ, ಬಂಧು, ಬಳಗದವರಿಗೆ, ಮತದಾರರಿಗೆ ಸ್ಥಳೀಯ ಪ್ರಜ್ಞಾವಂತ ಯುವಕರು ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಬೇಕೆಂದು ಗ್ರಾಮಲೆಕ್ಕಾಧಿಕಾರಿ ಜೆ.ಎಮ್.ನದಾಫ್ ಹೇಳಿದ್ದಾರೆ.
ಎಲ್ಲ ಮತದಾರರು ಕಡ್ಡಾಯವಾಗಿ ಮತಚಲಾಯಿಸಬೇಕು. ಸಾಕಷ್ಟು ಜನರು ಹಲವಾರು ಕಾರಣಗಳಿಂದ ಮತ ಚಲಾಯಿಸದೇ ದೂರ ಉಳಿಯುತ್ತಿದ್ದರು, ಈ ಸಲ ತಮಗೆ ಯೋಗ್ಯವಲ್ಲದ ಅಭ್ಯರ್ಥಿಗಳಿದ್ದರೆ ನೋಟಾ ಮತ ಚಲಾಯಿಸುವ ವ್ಯವಸ್ಥೆ ಮತದಾನ ಯಂತ್ರದಲ್ಲಿರುತ್ತದೆ ಆದ್ದರಿಂದ ಎಲ್ಲರೂ ಮತ ಚಲಾಯಿಸಬೇಕೆಂದು ಗ್ರಾಮ ಲೆಕ್ಕಾಧಿಕಾರಿ ನದಾಫ್ ಸ್ಥಳೀಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.